ನಿಷೇಧದ ಬಳಿಕ ಮತ್ತೆ ಪುಡಿದೆದ್ದ ಸ್ಟೀವನ್ ಸ್ಮಿತ್ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿ ಅಗ್ರಸ್ಥಾನಕ್ಕೆ!

ಚೆಂಡು ವಿರೂಪ ಪ್ರಕರಣದಲ್ಲಿ 1 ವರ್ಷ ಕಾಲ ನಿಷೇಧಕ್ಕೊಳಗಾಗಿ ಮತ್ತೆ ತಂಡವನ್ನು ಸೇರಿರುವ ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಸ್ಟೀವನ್ ಸ್ಮಿತ್-ವಿರಾಟ್ ಕೊಹ್ಲಿ
ಸ್ಟೀವನ್ ಸ್ಮಿತ್-ವಿರಾಟ್ ಕೊಹ್ಲಿ

ಮ್ಯಾಂಚೆಸ್ಟರ್: ಚೆಂಡು ವಿರೂಪ ಪ್ರಕರಣದಲ್ಲಿ 1 ವರ್ಷ ಕಾಲ ನಿಷೇಧಕ್ಕೊಳಗಾಗಿ ಮತ್ತೆ ತಂಡವನ್ನು ಸೇರಿರುವ ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಕೇವಲ 1 ಅಂಕದಿಂದ ಸ್ಟೀವನ್ ಸ್ಮಿತ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡದರೆ ಇರುವುದು ಅವರು ಎರಡನೇ ಸ್ಥಾನಕ್ಕಿಳಿಯಲು ಕಾರಣವಾಗಿದೆ.

ಈ ಮಧ್ಯೆ ವಿಂಡೀಸ್ ಪ್ರವಾಸದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾದ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಮತ್ತೆ ಟಾಪ್ 10ಗೆ ಮರಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com