ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಲಾಗದೆ ಬೀದಿಗೆ ಬಂದ್ರಾ ವಿರಾಟ್ ಕೊಹ್ಲಿ?; ನೆಟಿಗರ ಕುಚೇಷ್ಟೆ!

ನೂತನ ಮೋಟಾರ್ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ವಾಹನ ಸವಾರರು ಅತಿಯಾದ ದಂಡ ವಿಧಿಸಲಾಗದೇ ಬೈಕ್ ಮತ್ತು ಕಾರನ್ನೇ ಬಿಟ್ಟು ಹೋಗುವಂತಾ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಮಧ್ಯೆ ಬರಿಮೈಯಲ್ಲಿ ರಸ್ತೆ ಪಕ್ಕ ಕುಳಿತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ ನೆಟಿಗರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ನೂತನ ಮೋಟಾರ್ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ವಾಹನ ಸವಾರರು ಅತಿಯಾದ ದಂಡ ವಿಧಿಸಲಾಗದೇ ಬೈಕ್ ಮತ್ತು ಕಾರನ್ನೇ ಬಿಟ್ಟು ಹೋಗುವಂತಾ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಮಧ್ಯೆ ಬರಿಮೈಯಲ್ಲಿ ರಸ್ತೆ ಪಕ್ಕ ಕುಳಿತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ ನೆಟಿಗರು.

ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ವಿರಾಟ್ ಕೊಹ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಇನ್ನು ಕೊಹ್ಲಿ ಅರ ಬೆತ್ತಲೆಯಾಗಿ ರಸ್ತೆ ಪಕ್ಕದಲ್ಲಿ ಕುಳಿತಿರುವ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದರು. 

ಈ ಫೋಟೋವನ್ನು ಕಂಡ ಟ್ವೀಟರಿಗರು ಕುಚೇಷ್ಟೆ ಮಾಡಿದ್ದಾರೆ. ಸಂಚಾರಿ ನಿಮಯ ಉಲ್ಲಂಘಿಸಿ ದಂಡ ಕಟ್ಟಿದ ಮೇಲೆ ಜಗತ್ತಿನ ಶ್ರೀಮಂತ ಕ್ರಿಕೆಟಿಗನ ಪರಿಸ್ಥಿತಿ ಇದು ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ಗುರುಗ್ರಾಂನಲ್ಲಿ ದಿನೇಶ್ ಮದನ್ ಎಂಬಾತ 23 ಸಾವಿರ ದಂಡ ಕಟ್ಟಲಾಗದ ತಮ್ಮ ಬೈಕ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದರು. ಇದಾದ ಬಳಿಕ ಆಟೋ ರಿಕ್ಷಾ ಚಾಲಕನಿಗೆ ಬರೋಬ್ಬರಿ 43 ಸಾವಿರ ರುಪಾಯಿ ದಂಡ ವಿಧಿಸಲಾಗಿತ್ತು. ಅಷ್ಟೇ ಅಲ್ಲ ಬೆಂಗಳೂರಿನಲ್ಲೂ ಸಹ ವ್ಯಕ್ತಿಯೋರ್ವನ ಬಳಿ 17 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com