ಹೃದಯಾಘಾತ: ಪಾಕ್ ಮಾಜಿ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ನಿಧನ

ಪಾಕಿಸ್ತಾನದ ಮಾಜಿ ಲೆಗ್ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ಹೃದಯಾಘಾತದಿಂದ ಶುಕ್ರವಾರ ಲಾಹೋರ್ ನಲ್ಲಿ  ಮೃತಪಟ್ಟಿದ್ದಾರೆ. ಅವರಿಗೆ  63 ವರ್ಷ ವಯಸ್ಸಾಗಿತ್ತು.
ಅಬ್ದುಲ್ ಕ್ವಾಡಿರ್
ಅಬ್ದುಲ್ ಕ್ವಾಡಿರ್
Updated on: 

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಲೆಗ್ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ಹೃದಯಾಘಾತದಿಂದ ಶುಕ್ರವಾರ ಲಾಹೋರ್ ನಲ್ಲಿ  ಮೃತಪಟ್ಟಿದ್ದಾರೆ. ಅವರಿಗೆ  63 ವರ್ಷ ವಯಸ್ಸಾಗಿತ್ತು.

ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರನ ನಿಧನದ ಬಗ್ಗೆ ಕ್ವಾಡಿರ್ ಅವರ ಪುತ್ರ ಸಲ್ಮಾನ್ ಕ್ವಾಡಿರ್ ದೃಢಪಡಿಸಿದ್ದಾರೆ.  ಹೃದಯಾಘಾತ ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ಮಾಜಿ ಆಟಗಾರನ ನಿಧನಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಂತಾಪ ವ್ಯಕ್ತಪಡಿಸಿದೆ.  ವಿಭಿನ್ನ ರೀತಿಯ ಬೌಲಿಂಗ್ ನಿಂದಾಗಿ ಕ್ವಾಡಿರ್ ಡ್ಯಾನ್ಸಿಂಗ್ ಬೌಲರ್ ಎಂದೇ ಖ್ಯಾತರಾಗಿದ್ದರು. ಅವರು 67 ಟೆಸ್ಟ್ ಪಂದ್ಯಗಳನ್ನಾಡಿದ್ದು, 236 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. 104 ಏಕದಿನ ಪಂದ್ಯಗಳನ್ನಾಡಿದ್ದು, 132 ವಿಕೆಟ್ ಗಳನ್ನು ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com