ಸಂಗ್ರಹ ಚಿತ್ರ
ಕ್ರಿಕೆಟ್
ಇಸ್ರೋದ ಶ್ರಮವನ್ನು ಶ್ಲಾಘಿಸಿದ ಕೊಹ್ಲಿ, ಸೆಹ್ವಾಗ್
ಚಂದ್ರಯಾನ 2ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ಮೊದಲೇ ಸಂಪರ್ಕವನ್ನು ಕಳೆದುಕೊಂಡಿದ್ದರೂ, ಇಸ್ರೋದ ಸತತ ಪ್ರಯತ್ನ ಶ್ಲಾಘನೀಯ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ನವದೆಹಲಿ: ಚಂದ್ರಯಾನ 2ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ಮೊದಲೇ ಸಂಪರ್ಕವನ್ನು ಕಳೆದುಕೊಂಡಿದ್ದರೂ, ಇಸ್ರೋದ ಸತತ ಪ್ರಯತ್ನ ಶ್ಲಾಘನೀಯ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ವಿಜ್ಞಾನದಲ್ಲಿ ವೈಫಲ್ಯವೆಂಬುದು ಇಲ್ಲ. ನಾವು ಪ್ರಯೋಗ ಮಾಡುತ್ತೇವೆ ಮತ್ತು ಗಳಿಸುತ್ತೇವೆ. ಹಗಲು ರಾತ್ರಿ ಪಟ್ಟುಬಿಡದೆ ಕೆಲಸ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಜೈ ಹಿಂದ್, ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
There's nothing like failure in science, we experiment & we gain. Massive respect for the scientists at #ISRO who worked relentlessly over days & nights. The nation is proud of you, Jai Hind!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ