ಎಂಎಸ್ ಧೋನಿ ಸಾಧಿಸಲು ಏನೂ ಉಳಿದಿಲ್ಲ- ವಿಶ್ವನಾಥ್ ಆನಂದ್ 

ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ವೃತ್ತಿರಂಗದಲ್ಲಿ ಸಾಧಿಸಲು ಇನ್ನೂ ಏನೂ ಉಳಿದಿಲ್ಲ. ಹೀಗಾಗಿ ನಿವೃತ್ತಿ ಪ್ರಕಟಿಸಬೇಕೆಂದು ಖ್ಯಾತ ಚೆಸ್ ಆಟಗಾರ ವಿಶ್ವನಾಥ್ ಆನಂದ್ ಹೇಳಿದ್ದಾರೆ.
ಧೋನಿ, ವಿಶ್ವನಾಥ್ ಆನಂದ್
ಧೋನಿ, ವಿಶ್ವನಾಥ್ ಆನಂದ್
Updated on

ಕೊಲ್ಕತ್ತಾ: ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ವೃತ್ತಿರಂಗದಲ್ಲಿ ಸಾಧಿಸಲು ಇನ್ನೂ ಏನೂ ಉಳಿದಿಲ್ಲ. ಹೀಗಾಗಿ ನಿವೃತ್ತಿ ಪ್ರಕಟಿಸಬೇಕೆಂದು ಖ್ಯಾತ ಚೆಸ್ ಆಟಗಾರ ವಿಶ್ವನಾಥ್ ಆನಂದ್ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ನಿಂದ ನಿರ್ಗಮಿಸಿದ ನಂತರ ಹಿರಿಯ ವಿಕೆಟ್ ಕೀಪರ್ ಧೋನಿ ಅವರ ರಾಜೀನಾಮೆ ಒತ್ತಡಗಳು ಹೆಚ್ಚಾಗುತ್ತಿವೆ. ಆದರೆ, ಈ ಬಗ್ಗೆ ಧೋನಿ ಎಲ್ಲಿಯೂ ಏನನ್ನೂ ಹೇಳಿಲ್ಲ. ಕ್ರಿಕೆಟ್ ನಿಂದ ಎರಡು ತಿಂಗಳ ಕಾಲ ರಜೆ ಪಡೆದು ಕಾಶ್ಮೀರ ಕಣಿವೆಯಲ್ಲಿ ದೇಶ ಸೇವೆಯನ್ನು ಸಲ್ಲಿಸಿದ್ದಾರೆ.ಸೆಪ್ಟೆಂಬರ್ 15ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಧೋನಿ ಅವರನ್ನು ಆಯ್ಕೆ ಮಾಡಿಲ್ಲ .

ತಮಗೆ  ಸರಿ ಎನಿಸಿದ ನಿರ್ಧಾರ ಕೈಗೊಳ್ಳುವುದು ಧೋನಿ ಅವರಿಗೆ ಗೊತ್ತಿದೆ. ಆದರೆ, ಅವರು ಸಾಧಿಸಲು ಏನೂ ಉಳಿದಿಲ್ಲ ಎಂದನಿಸುತ್ತಿದೆ ಎಂದು ವಿಶ್ವನಾಥ್ ಆನಂದ್ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಧೋನಿ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದು, ಎಲ್ಲವನ್ನೂ ಸಾಧಿಸಿದ್ದಾರೆ. ಎರಡು ವಿಶ್ವಕಪ್ ಗಳನ್ನು ಗೆದ್ದಿದ್ದಾರೆ. ಧೋನಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ  2007ರ ವಿಶ್ವ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್  ಗೆದ್ದಿದೆ.ಅವರೊಬ್ಬ ಶ್ರೇಷ್ಠ ನಾಯಕರಾಗಿದ್ದಾರೆ. ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನು ಅವರೇ ನಿರ್ಧರಿಸುವುದು ಸೂಕ್ತ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com