ಭಾರತ ಮೂಲದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್ ಕ್ರಿಕೆಟಿಗ ಹಸನ್ ಅಲಿ!

ಭಾರತೀಯ ಮೂಲದ ಶಾಮಿಯಾ ಅರ್ಜೂ ಜೊತೆ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶಾಮಿಯಾ ಖಾನ್-ಹಸನ್ ಅಲಿ
ಶಾಮಿಯಾ ಖಾನ್-ಹಸನ್ ಅಲಿ

ದುಬೈ: ಭಾರತೀಯ ಮೂಲದ ಶಾಮಿಯಾ ಅರ್ಜೂ ಜೊತೆ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಿದ್ದಾರೆ. 

ಭಾರತೀಯ ಮೂಲದ ಶಾಮಿಯಾ ಅರ್ಜೂ ದೆಹಲಿಯಲ್ಲಿ ನೆಲೆಸಿದ್ದು ವಿಮಾನ ಇಂಜಿನಿಯರ್ ಆಗಿದ್ದು ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. 25 ವರ್ಷದ ಹಸನ್ ಅರ್ಜೂ ನಡುವೆ ಕಳೆದ ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಪ್ರೇಮಾಂಕುರವಾಗಿತ್ತು.

ಶೋಯೆಬ್ ಮಲೀಕ್, ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಬಳಿಕ ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ 4 ನೇ ಪಾಕ್ ಕ್ರಿಕೆಟಿಗ ಹಸನ್ ಅರ್ಜೂ ಆಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com