ಅಸ್ಸಾಂ, ತ್ರಿಪುರಾದಲ್ಲಿ ಕರ್ಫ್ಯೂ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ಸ್ಥಗಿತ

ಪೌರತ್ವ ( ತಿದ್ದುಪಡಿ) ಮಸೂದೆ ವಿರೋಧಿಸಿ  ಅಸ್ಸಾಂ ಹಾಗೂ ತ್ರಿಪುರಾದಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ರಣಜಿ ಟ್ರೋಫಿಯ  ನಾಲ್ಕನೇ ದಿನದಾಟದ  ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.
ಪ್ರತಿಭಟನೆಯ ಚಿತ್ರ
ಪ್ರತಿಭಟನೆಯ ಚಿತ್ರ

ಅಗರ್ತಲಾ: ಪೌರತ್ವ ( ತಿದ್ದುಪಡಿ) ಮಸೂದೆ ವಿರೋಧಿಸಿ  ಅಸ್ಸಾಂ ಹಾಗೂ ತ್ರಿಪುರಾದಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ರಣಜಿ ಟ್ರೋಫಿಯ  ನಾಲ್ಕನೇ ದಿನದಾಟದ  ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

 ಅಸ್ಸಾಂ- ಸರ್ವಿಸಸ್ ಸ್ಫೋರ್ಟ್ಸ್  ಕಂಟ್ರೋಲ್ ಬೋರ್ಡ್ ಹಾಗೂ ತ್ರಿಪುರಾ-  ಜಾರ್ಖಂಡ್ ನಡುವಣ ಪಂದ್ಯ ನಡೆಯಬೇಕಿತ್ತು. 

ಪಂದ್ಯಕ್ಕೆ ಹೋಗದಂತೆ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿಂದ ಸಲಹೆ ಬಂದಿದೆ. ಆಟಗಾರರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಹೋಟೆಲ್ ನಲ್ಲಿಯೇ ಉಳಿಯುವಂತೆ ತಿಳಿಸಲಾಗಿದೆ ಎಂದು ಬಿಸಿಸಿಐ ಕ್ರಿಕೆಟ್ ಅಪರೇಷನ್ ಜಿಎಂ ಸಾಬಾ ಕರೀಂ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪಂದ್ಯವನ್ನು ಮತ್ತೆ ಆಡಬೇಕಾ ಅಥವಾ ಅಂಕಗಳನ್ನು ಹಂಚಿಕೊಳೋದಾ?  ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com