ಅಂಪೈರ್ ಎಡವಟ್ಟಿನ ವಿರುದ್ಧ ವಿರಾಟ್ ಕೊಹ್ಲಿ ಗರಂ, ವಿಡಿಯೋ ವೈರಲ್!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ರನೌಟ್ ಕುರಿತಂತೆ ಮೈದಾನದ ಅಂಪೈರ್ ಎಡವಟ್ಟಿನ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. 
ಕೊಹ್ಲಿ
ಕೊಹ್ಲಿ

ಚೆನ್ನೈ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ರನೌಟ್ ಕುರಿತಂತೆ ಮೈದಾನದ ಅಂಪೈರ್ ಎಡವಟ್ಟಿನ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. 

ಅದು 48ನೇ ಓವರ್. ಕೆಮೋ ಪೌಲ್ ಬೌಲಿಂಗ್ ಮಾಡಿದ್ದು ಸ್ಟ್ರೈಕ್ ನಲ್ಲಿದ್ದ ಜಡೇಜಾ ಬಿರುಸಿನ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಫೀಲ್ಡರ್ ಕೈಸೇರಿತ್ತು. ಈ ವೇಳೆ ಸಿಂಗಲ್ ತೆಗೆದುಕೊಳ್ಳಲು ಓಡಿದರು. ಫೀಲ್ಡರ್ ಚೆಂಡನ್ನು ನಾನ್ ಸ್ಟ್ರೈಕ್ ನ ವಿಕೆಟ್ ಗೆ ಹೊಡೆದರು. 

ಇನ್ನು ಅಂಪೈರ್ ಜಡೇಜಾ ಚೆಂಡು ವಿಕೆಟ್ ಗೆ ಬಡಿಯುವುದಕ್ಕೂ ಮುನ್ನ ಕ್ರೀಸ್ ಗೆ ಬಂದಿದ್ದಾರೆ ಎಂದು ಭಾವಿಸಿ ಸುಮ್ಮನಿದ್ದರು. ಇನ್ನು ಫೀಲ್ಡರ್ ಗಳ ಸಹ ಪರಿಣಾಮಕಾರಿ ರನೌಟ್ ಅಪೀಲ್ ಮಾಡಲಿಲ್ಲ. ಇದರಿಂದ ಮೈದಾನದ ಅಂಪೈರ್ ಸಹ ಸುಮ್ಮನಾಗಿದ್ದರು. ಆದರೆ ಟೆಲಿವಿಷನ್ ರಿಪ್ಲೇ ನಂತರ ಮೈದಾನದ ಅಂಪೈರ್ ಮೂರನೇ ಅಂಪೈರ್ ಮನವಿ ಮಾಡಿದ ನಂತರ ರನೌಟ್ ಪರಿಶೀಲನೆ ಮಾಡಿದ ಮೂರನೇ ಅಂಪೈರ್ ರನೌಟ್ ಆಗಿರುವುದಾಗಿ ಮೈದಾನದ ಅಂಪೈರ್ ಗೆ ಸೂಚಿಸಿದ್ದರಿಂದ ಜಡೇಜಾ ರನೌಟ್ ಆಗಿ ಪೆವಿಲಿಯನ್ ಸೇರಬೇಕಾಯಿತು. 

ಇದರಿಂದ ಕೋಪಗೊಂಡಿರುವ ಕೊಹ್ಲಿ ಬೌಂಡರಿ ಗೆರೆ ಬಳಿ ಬಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೀಗ ಸಾಮಾಜಿಕ ಜಾಲಾತಣದಲ್ಲೂ ಈ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಚೆಂಡು ಡೆಡ್ ಆದ ನಂತರ ಮೂರನೇ ಅಂಪೈರ್ ನಿರ್ಧಾರ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೊಹ್ಲಿ ಕೋಪಕ್ಕೂ ಇದೇ ಕಾರಣವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com