ಅನ್ ಲಕ್ಕಿ ಮೈದಾನದಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ, ಸರಣಿ ಕೈ ವಶ ಮಾಡಿಕೊಂಡ ಟೀಂ ಇಂಡಿಯಾ!

ಬಾರಾಬತಿ ಕ್ರೀಡಾಂದಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 4ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸರಣಿ ಕೈ ವಶ ಮಾಡಿಕೊಂಡಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ಕಟಕ್ : ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 4ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದ್ದು, 2-1 ಅಂತರದಿಂದ ಸರಣಿ ಕೈ ವಶ ಮಾಡಿಕೊಂಡಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಕೋಲಸ್ ಪೂರನ್ ಮತ್ತು ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ  315 ರನ್ ಪೇರಿಸಿತು. 

ವಿಂಡೀಸ್ ಪರ ಬ್ಯಾಟಿಂಗ್ ನಲ್ಲಿ ಲೂವಿಸ್ 21, ಶಾಹಿ ಹೋಪ್ 42, ಹೆಟ್ಮರ್ 37, ನಿಕೋಲಸ್ ಪೂರನ್ 89 ಮತ್ತು ಕೀರನ್ ಪೊಲಾರ್ಡ್ ಅಜೇಯ 74 ರನ್ ಪೇರಿಸಿದರು. 

ಭಾರತ ಪರ ಬೌಲಿಂಗ್ ನಲ್ಲಿ ನವದೀಪ್ ಶೈನಿ 2, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. 

ವೆಸ್ಟ್ ಇಂಡೀಸ್ ನೀಡಿದ 316 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾದ ರಾಹುಲ್ ಶರ್ಮಾ 63, ಕೆಎಲ್ ರಾಹುಲ್ 77 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ 81 ಎಸೆತಗಳಲ್ಲಿ 4 ಬೌಂಡರಿಗಳ ಮೂಲಕ 85 ರನ್ ಬಾರಿಸಿದರು. 

ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ ಉದಯೋನ್ಮುಖ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಇಂದಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.  ಕೇವಲ 7 ರನ್ ಗಳಿಸಿ ಪೌಲ್ ಬೌಲಿಂಗ್ ನೀಡಿ ಫೆವಿಲಿಯನ್ ಹಾದಿ ಹಿಡಿದರು. ನಂತರ ಬಂದ ಕೇದಾರ್ ಜಾದವ್ ಕೂಡಾ ಆದೇ ಹಾದಿ ಹಿಡಿದರು. ನಂತರ ಜೊತೆಯಾದ ರವೀಂದ್ರ ಜಡೇಜಾ ಹಾಗೂ ಎಸ್ ಎನ್ ಠಾಕೂರ್  ಮುರಿಯದ ಜೊತೆಯಾಟದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಸರಣಿ ಕೈ ವಶಪಡಿಸಿಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com