ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಟೆಸ್ಟ್ ತಂಡಕ್ಕೆ ಭಾರತದ ವಿರಾಟ್ ಕೊಹ್ಲಿ ನಾಯಕ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿ ಯಶಸ್ವಿಯಾಗಿ 2019ರ ಕ್ರಿಕೆಟ್ ಖುತುವನ್ನು ಪೂರೈಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಸಿಡ್ನಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿ ಯಶಸ್ವಿಯಾಗಿ 2019ರ ಕ್ರಿಕೆಟ್ ಖುತುವನ್ನು ಪೂರೈಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.

ಹೌದು...ವಿರಾಟ್ ಕೊಹ್ಲಿ ಅವರನ್ನು ಕ್ರಿಕೆಟ್ ಬೋರ್ಡ್ ಆಫ್ ಆಸ್ಟ್ರೇಲಿಯಾ ಸಿಎ ತನ್ನ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಿದ್ದು, ಈ ತಂಡಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ಇಲೆವೆನ್ ಎಂದು ಹೆಸರಿಸಲಾಗಿದೆ. ಇದರಲ್ಲಿ ಈ ದಶಕದ ವಿಶ್ವದ ಅನುಭವಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.  ವಿಶ್ವ ಇಲೆವೆನ್ ಮಾದರಿಯಲ್ಲಿ ಈ ತಂಡವನ್ನು ಆಯ್ಕೆ ಮಾಡಲಾಗಿದ್ದು, ಐದು ದೇಶಗಳ ಆಟಗಾರರಿಗೆ ಅದರಲ್ಲಿ ಸ್ಥಾನ ನೀಡಲಾಗಿದೆ. 

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ಇಲೆವೆನ್ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಆದರೆ ಅವರ ನೆಚ್ಚಿನ ನಂಬರ್ -4 ಬ್ಯಾಟಿಂಗ್ ಕ್ರಮವನ್ನು ಬದಲಾಯಿಸಲಾಗಿದೆ. ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರನ್ನು ಈ ಸಂಖ್ಯೆಯಲ್ಲಿ ಬದಲಾಯಿಸಲಾಗಿದೆ. ಆಸ್ಟ್ರೇಲಿಯಾ ಪರ ಸ್ಮಿತ್ 4 ನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಟೆಸ್ಟ್ ತಂಡ ಇಂತಿದೆ
ಅಲಸ್ಟೇರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ನಾಥನ್ ಲಿಯಾನ್, ಜೇಮ್ಸ್ ಆಂಡರ್ಸನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com