ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ವಿಡಿಯೋ ವೈರಲ್

ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

Published: 30th December 2019 11:04 AM  |   Last Updated: 30th December 2019 11:15 AM   |  A+A-


afridi

ಅಫ್ರಿದಿ

Posted By : Manjula VN
Source : Online Desk

ಸಂದರ್ಶನದಲ್ಲಿ ಹಿಂದು ಸಂಪ್ರದಾಯ ಅಣಕಿಸಿದ ಅಫ್ರಿದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ಆಕ್ರೋಶ

ಇಸ್ಲಾಮಾಬಾದ್: ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿಯವರು, ಟಿವಿ ನೋಡುತ್ತಿದ್ದ ವೇಳೆ ಮಗಳು ಆರತಿ ಮಾಡುವುದನ್ನು ನೋಡಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ. ಹೇಳಿಕೆ ನೀಡುವ ವೇಳೆ ಆರತಿ ಪದವನ್ನು ಹೇಳಲು ಬಾರದಂತೆ ಸಂಪ್ರದಾಯವನ್ನೇ ಅಣಕಿಸುವ ರೀತಿ ವರ್ತಿಸಿದ್ದಾರೆ. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 

ಸಂದರ್ಶನ ನಡೆಸುತ್ತಿದ್ದ ಮಹಿಳೆ ಅಫ್ರಿದಿಯವರನ್ನು ಎಂದಾದರೂ ನೀವು ಟಿವಿ ಒಡೆದು ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 

ಈ ವೇಳೆ ಉತ್ತರ ನೀಡಿರುವ ಅಫ್ರಿದಿ, ಒಂದೊಮ್ಮೆ ಒಡೆದು ಹಾಕಿದ್ದೆ. ನನ್ನ ಪತ್ನಿ ಪ್ರತೀನಿತ್ಯ ಧಾರಾವಾಹಿಗಳನ್ನು ನೋಡುತ್ತಿದ್ದರು. ಆಗ ಸ್ಟಾರ್ ಪ್ಲಸ್ ಅತ್ಯಂತ ಪ್ರಸಿದ್ಧಿ ಪಡೆದಿದ್ದ ವಾಹಿನಿಯಾಗಿತ್ತು. ಮಕ್ಕಳೊಂದಿಗೆ ಅಲ್ಲದೆ, ಒಬ್ಬರೇ ಕುಳಿತು ಟಿವಿ ನೋಡುವಂತೆ ತಿಳಿಸಿದ್ದೆ. ಒಂದೊಮ್ಮೆ ನನ್ನ ಮಗಳು ಟಿವಿ ನೋಡಿಕೊಂಡು ಆರತಿ ಮಾಡುತ್ತಿದ್ದಳು. ಈ ವೇಳೆ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದಾರೆ. 

ಹೇಳಿಕೆ ವೇಳೆ ಆರತಿ ಪದವನ್ನು ಹೇಳಲು ಬಾರದಂತೆ ಹಿಂದೂ ಸಂಪ್ರದಾಯವನ್ನು ಅಫ್ರಿದಿ ಅಣಕಿಸಿರುವುದು ಕಂಡು ಬಂದಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಫ್ರಿದಿ ವಿರುದ್ಧ ಭಾರತೀಯರು ಕಿಡಿಕಾರುತ್ತಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp