ಪುಲ್ವಾಮಾ ಉಗ್ರ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್ ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿದೆ. ಈ ಮಧ್ಯೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಪರದೆ ಹಾಕಿ ಮುಚ್ಚಲಾಗಿದೆ.
ಉಗ್ರ ದಾಳಿಯನ್ನು ಮುಂಬೈನ ಬ್ರೇಬೋರ್ನ್ ಕ್ರೀಡಾಂಗದಲ್ಲಿರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ) ತೀವ್ರವಾಗಿ ಖಂಡಿಸಿದೆ. ಇಷ್ಟೇ ಇಲ್ಲದೆ ದಾಳಿಯ ವಿರುದ್ಧ ಪ್ರತಿಭಟನೆ ಸೂಚಕವಾಗಿ ಸಿಸಿಐ ರೆಸ್ಟೋರೆಂಟ್ ನಲ್ಲಿದ್ದ ಇಮ್ರಾನ್ ಖಾನ್ ಫೋಟೋವನ್ನು ಪರದೆಯಿಂದ ಮುಚ್ಚಿದೆ.
ಸಿಸಿಐ ಕ್ಲಬ್ ರೆಸ್ಟೋರೆಂಟ್ ನಲ್ಲಿ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಬ್ರಿಯಾನ್ ಲಾರಾ ಸೇರಿದಂತೆ ಮಾಜಿ ಹಾಗೂ ಹಾಲಿ ದಿಗ್ಗಜ ಕ್ರಿಕೆಟಿಗರ ಫೋಟೋಗಳನ್ನು ಹಾಕಲಾಗಿದೆ. ಇದರಲ್ಲಿ ಕಪಿಲ್ ದೇವ್ ಫೋಟೋ ಸನಿಹದಲ್ಲೇ ಇಮ್ರಾನ್ ಖಾನ್ ಫೋಟೋ ಹಾಕಲಾಗಿತ್ತು. 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಫೋಟೋ ಹಾಕಲಾಗಿತ್ತು. 
ಈ ಫೋಟೋವನ್ನು ಎತ್ತಂಗಡಿ ಮಾಡುವ ಕುರಿತು ಈಗಲೇ ಏನು ಹೇಳುವುದಿಲ್ಲ. ಆದರೆ ಈ ಫೋಟೋ ಇಲ್ಲಿ ಶಾಶ್ವತವಾಗಿ ಇರುವ ಯಾವುದೇ ಲಕ್ಷಣಗಳಿಲ್ಲ ಎಂದು ಸಿಸಿಐ ಅಧ್ಯಕ್ಷ ಪ್ರೇಮಾಲ್ ಉದಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com