ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ ಎರಡು ಮಹತ್ವದ ದಾಖಲೆಗಳನ್ನು ಬರೆದಿದೆ.
ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ
ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ
ಮೌಂಟ್​​​ ಮೌಂಗನ್ಯುಯಿ: ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ ಎರಡು ಮಹತ್ವದ ದಾಖಲೆಗಳನ್ನು ಬರೆದಿದೆ. 
ಒಂದು ದಶಕಕದ ನಂತರ ನ್ಯೂಜಿಲ್ಯಾಂಡ್ ವಿರುದ್ಧ ಅತಿ ಹೆಚ್ಚು ರನ್ ಗಳ ಅಂತರದಿಂದ ಗೆದ್ದಿರುವ ದಾಖಲೆಯಾದರೆ, ಅತ್ಯುತ್ತಮ ಬೌಲಿಂಗ್ ಮಾಡಿ ಕಿವೀಸ್ ಆಟಗಾರರನ್ನು ಕಾಡಿದ ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ ನಿರ್ಮಿಸಿದ್ದಾರೆ.  ಕಳೆದ ಪಂದ್ಯದಲ್ಲಿ 4 ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕುಲ್ದೀಪ್ ಯಾದವ್, 2 ನೇ ಪಂದ್ಯದಲ್ಲೂ 4 ವಿಕೆಟ್ ಗಳಿಸಿದ್ದಾರೆ. ಇದರಲ್ಲೇನು ವಿಶೇಷ ಅಂತ ಕೇಳ್ತೀರಾ? ಹೌದು ಏಕದಿನ ಪಂದ್ಯವೊಂದರಲ್ಲಿ ಸತತ ಎರಡನೇ ಪಂದ್ಯದಲ್ಲಿ ಈ ವರೆಗೂ ಯಾವುದೇ ಸ್ಪಿನ್ನರ್ 4 ವಿಕೆಟ್ ಗಳಿಸಿಲ್ಲ. 
ಆದರೆ ಮೊದಲನೇ ಪಂದ್ಯದಲ್ಲಿ 4 ವಿಕೆಟ್ ಗಳಿಸಿದ್ದ ಕುಲ್ದೀಪ್ ಯಾದವ್ ಎರಡನೇ ಪಂದ್ಯದಲ್ಲೂ ಸಹ 4 ವಿಕೆಟ್ ಗಳಿಸಿದ್ದು  ವಿಶ್ವದಾಖಲೆ ನಿರ್ಮಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com