ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ: ವಿರಾಟ್

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು 28 ರನ್ ಗಳಿಂದ ಮಣಿಸಿ ಸೆಮಿಫೈನಲ್ಸ್ ತಲುಪಿದ್ದು, ನಿಜಕ್ಕೂ ಸಂತಸ ತಂದಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

Published: 03rd July 2019 12:00 PM  |   Last Updated: 03rd July 2019 07:58 AM   |  A+A-


ICC World Cup 2019: Virat Kohli posts inspirational message after qualifying for semi-finals

ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ: ವಿರಾಟ್

Posted By : SBV SBV
Source : UNI
ಬರ್ಮಿಂಗ್ ಹ್ಯಾಮ್: ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು 28 ರನ್ ಗಳಿಂದ ಮಣಿಸಿ ಸೆಮಿಫೈನಲ್ಸ್ ತಲುಪಿದ್ದು, ನಿಜಕ್ಕೂ ಸಂತಸ ತಂದಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಭಾರತ ತಂಡ ಆಡಿರುವ 8 ಪಂದ್ಯಗಳಿಂದ ಆರು ಜಯ ಸಾಧಿಸಿ, ಒಂದು ಪಂದ್ಯ ರದ್ದಾಗಿದ್ದು, ಒಂದು ಪಂದ್ಯ ಸೋತಿದೆ. ಟೀಮ್ ಇಂಡಿಯಾ ಒಟ್ಟು 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಆಸ್ಟ್ರೇಲಿಯಾ ಬಳಿಕ ಸೆಮಿಫೈನಲ್ಸ್ ಪ್ರವೇಶಿಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಟೂರ್ನಿಯಲ್ಲಿ ಭಾರತ ಇನ್ನು ಒಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ.
' ಬಾಂಗ್ಲಾ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ವಿಫಲವಾಗಿದ್ದರೂ, ಭರ್ಜರಿ ಪ್ರದರ್ಶನ ನೀಡಿದೆ. ಎದುರಾಳಿ ತಂಡ ಕೊನೆಯ ವರೆಗೂ ಹೋರಾಟ ಪ್ರದರ್ಶಿಸಿದೆ. ಕೊನೆಯ ವಿಕೆಟ್ ವರೆಗೂ ಬಾಂಗ್ಲಾ, ಗೆಲುವಿನ ವಿಶ್ವಾಸ ಹೊಂದಿತ್ತು. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಬಹಳ ಕಷ್ಟಪಡಬೇಕಾಯಿತು' ಎಂದು ವಿರಾಟ್ ತಿಳಿಸಿದ್ದಾರೆ.

'ತಂಡ ಸೆಮಿಫೈನಲ್ಸ್ ಪ್ರವೇಶಿಸಿದ್ದು ಖುಷಿ ತಂದಿದೆ. ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರೆಸಿದ್ದೇವೆ. ಒಂದು ಪಂದ್ಯ ಬಾಕಿ ಇರುವಂತೆ ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ' ಎಂದಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp