ಐಸಿಸಿ ಅಮಾನತು ಎಫೆಕ್ಟ್: ಬಾಂಗ್ಲಾದೇಶ ಪ್ರವಾಸ ರದ್ದುಗೊಳಿಸಿದ ಜಿಂಬಾಬ್ವೆ

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಿಂದ ಅಮಾನತುಗೊಳಗಾಗಿರುವ ಜಿಂಬಾಬ್ವೆ ತಂಡವು ತ್ರಿಕೋನ ಟಿ-20 ಸರಣಿ ಆಡಲು ಬಾಂಗ್ಲಾದೇಶದ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಶನಿವಾರ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹರಾರೆ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಿಂದ ಅಮಾನತುಗೊಳಗಾಗಿರುವ ಜಿಂಬಾಬ್ವೆ ತಂಡವು ತ್ರಿಕೋನ ಟಿ-20 ಸರಣಿ ಆಡಲು ಬಾಂಗ್ಲಾದೇಶದ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಶನಿವಾರ ಸ್ಪಷ್ಟಪಡಿಸಿದೆ.
ಮುಂಬರುವ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಜಿಂಬಾಬ್ವೆ ಟಿ-20 ಸರಣಿ ಆಡಬೇಕಾಗಿತ್ತು. ಆದರೆ, ಐಸಿಸಿ ನೀತಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಜಂಬಾಬ್ವೆ ಕ್ರಿಕೆಟ್‌ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಮಾನತುಗೊಳಿಸಿದೆ. ಹಾಗಾಗಿ, ಬಾಂಗ್ಲಾ ಪ್ರವಾಸದಿಂದ ಹಿಂದೆ ಸರಿದಿದೆ.
ಪ್ರಸ್ತುತ ಜಿಂಬಾಬ್ವೆನಲ್ಲಿ ದೇಶೀಯ ಟೂರ್ನಿಯ ಅಥವಾ ಸರಣಿ ಆಯೋಜಿಸಲು ಸಾಧ್ಯವಾಗಿಲ್ಲ. ಜತೆಗೆ, ಅಂತಾರಾಷ್ಟ್ರೀಯ ಕಟ್ಟುಪಾಡುಗಳ ಮೇಲೆಯೂ ಹೊಡೆತ ಬಿದ್ದಿದೆ. ಆದ್ದರಿಂದ, ಬಾಂಗ್ಲಾದೇಶದಲ್ಲಿ ನಡೆಯುವ ತ್ರಿಕೋನ ಟಿ-20 ಸರಣಿ ಕೈ ಬಿಡಲಾಗಿದೆ ಎಂದು ಜಿಂಬಾಣ್ವೆ ಕ್ರಿಕೆಟ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com