ಸೇನಾ ತರಬೇತಿ ಪಡೆಯಲು ಮಹೇಂದ್ರ ಸಿಂಗ್​ ಧೋನಿಗೆ ಅನುಮತಿ

ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಕೋರಿಕೆಯಂತೆ ಎರಡು ತಿಂಗಳ ಕಾಲ ಸೇನಾ ಬೆಟಾಲಿಯನ್‌ನೊಂದಿಗೆ ತರಬೇತಿ ಪಡೆಯಲು ಸೇನಾ ಮುಖ್ಯಸ್ಥ ಜನರಲ್....
ಮಹೇಂದ್ರ ಸಿಂಗ್​ ಧೋನಿ
ಮಹೇಂದ್ರ ಸಿಂಗ್​ ಧೋನಿ
ನವದೆಹಲಿ: ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಕೋರಿಕೆಯಂತೆ ಎರಡು ತಿಂಗಳ ಕಾಲ ಸೇನಾ ಬೆಟಾಲಿಯನ್‌ನೊಂದಿಗೆ ತರಬೇತಿ ಪಡೆಯಲು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅನುಮತಿಸಿದ್ದಾರೆ. ಇದರಂತೆ ಧೋನಿ ಧುಮುಕುಕೊಡೆ ರೆಜಿಮೆಂಟ್‌ನ ಪ್ರಾದೇಶಿಕ ಸೇನಾ ಬೆಟಾಲಿಯನ್‌ ಜತೆಗೆ ಮುಂದಿನ ಎರಡು ತಿಂಗಳು ಸೇನಾ ತರಬೇತಿ ಹೊಂದಲಿದ್ದಾರೆ.
ಸೇನೆಯ ಲೆಫ್ಟಿನೆಂಟ್ ಕರ್ನಲ್ ಗೌರವ ಹೊಂದಿರುವ ಧೋನಿ  ಧುಮುಕುಕೊಡೆ ರೆಜಿಮೆಂಟ್ ಬೆಟಾಲಿಯನ್‌ನೊಂದಿಗೆ ತರಬೇತಿ ಪಡೆಯುವವರಿದ್ದು ತರಬೇತಿಯ ಒಂದು ಭಾಗವು ಕಾಶ್ಮೀರ ಕಣಿವೆಯಲ್ಲಿ ನಡೆಯುವ ನಿರೀಕ್ಷೆಯಿದೆ ಆದರೆ ಧೋನಿ ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಭಗವಹಿಸುವುದಿಲ್ಲ.
2011 ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿದ್ದ ಧೋನಿ  ಪ್ರಾದೇಶಿಕ ಸೈನ್ಯದ 106 ಕಾಲಾಳುಪಡೆ ಬೆಟಾಲಿಯನ್‌ಗೆ ಸೇರಿದವರು. ಧುಮುಕುಕೊಡೆ ರೆಜಿಮೆಂಟ್‌ಗಾಗಿ  ಸೇನೆಯು ಹೊಂದಿರುವ ಎರಡು ಬೆಟಾಲಿಯನ್‌ಗಳಲ್ಲಿ ಇದೂ ಒಂದಾಗಿದೆ.
ಧೋನಿ ಅವರು 2 ತಿಂಗಳ ಕಾಲ ಟೀಂ ಇಂಡಿಯಾ ತಂಡಕ್ಕೆ ಲಭ್ಯವಿಲ್ಲ ದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.  ಮ್ಯಾಂಚೆಸ್ಟರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿನೊಂದಿಗೆ ತಂಡದ ವಿಶ್ವಕಪ್ 2019 ಪ್ರಯಾಣ ಅಂತ್ಯವಾದ ಬಳಿಕ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ ತಾವು ಕ್ರಿಕೆಟ್ ನಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com