ಕ್ರಿಕೆಟ್‌ನಿಂದ ನಿಷೇಧ: ಇನ್ನಷ್ಟು ಸಮರ್ಥನಾಗಿ ಮೈದಾನಕ್ಕೆ ಮರಳುತ್ತೇನೆ; ಪೃಥ್ವಿ ಶಾ

ಉದ್ದೀಪನಾ ಮದ್ದು ಸೇವನೆಯಿಂದ ಸಿಕ್ಕಿ ಬಿದ್ದು ಎಂಟು ತಿಂಗಳು ಕ್ರಿಕೆಟ್ ನಿಂದ ಅಮಾನತುಗೊಂಡಿರುವ ಭಾರತ ಟೆಸ್ಟ್ ತಂಡದ ಆರಂಭಿಕ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇನ್ನೂ ಹೆಚ್ಚು ಬಲಶಾಲಿ...

Published: 31st July 2019 12:00 PM  |   Last Updated: 31st July 2019 07:40 AM   |  A+A-


Prithvi Shah

ಪೃಥ್ವಿ ಶಾ

Posted By : VS VS
Source : UNI
ನವದೆಹಲಿ: ಉದ್ದೀಪನಾ ಮದ್ದು ಸೇವನೆಯಿಂದ ಸಿಕ್ಕಿ ಬಿದ್ದು ಎಂಟು ತಿಂಗಳು ಕ್ರಿಕೆಟ್ ನಿಂದ ಅಮಾನತುಗೊಂಡಿರುವ ಭಾರತ ಟೆಸ್ಟ್ ತಂಡದ ಆರಂಭಿಕ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇನ್ನೂ ಹೆಚ್ಚು ಬಲಶಾಲಿ ಹಾಗೂ ಸುಧಾರಣೆಯೊಂದಿಗೆ ಅಂಗಳಕ್ಕೆ ಮರಳುವುದಾಗಿ ಹೇಳಿಕೊಂಡಿದ್ದಾರೆ. 

ಕಳೆದ ಫೆಬ್ರವರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಪೃಥ್ವಿ ಶಾ ಅವರ ಮೂತ್ರದ ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಡೋಪಿಂಗ್ ಪರೀಕ್ಷೆಯಿಂದ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿತ್ತು. ಹಾಗಾಗಿ, ಅವರಿಗೆ ಎಂಟು ತಿಂಗಳ ಕಾಲ ಬಿಸಿಸಿಐ ಕ್ರಿಕೆಟ್ ನಿಂದ ಅಮಾನತುಗೊಳಿಸಿದೆ.
 
ಶಿಕ್ಷೆಗೆ ಒಳಗಾಗಿರುವ ಯುವ ಬ್ಯಾಟ್ಸ್ ಮನ್ ಕಳೆದ ಮಾರ್ಚ್ 16ರಿಂದ ಮುಂಬರುವ ನವೆಂಬರ್ 15ರವರೆಗೆ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ. ಸೆಪ್ಟಂಬರ್ 15 ಮಧ್ಯರಾತ್ರಿಯಿಂದ ಅವರು ಕ್ರಿಕೆಟ್ ಅಭ್ಯಾಸಕ್ಕೆ ಮರಳಬಹುದು.
Stay up to date on all the latest ಕ್ರಿಕೆಟ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp