ಐಸಿಸಿ ವಿಶ್ವಕಪ್: ಇಂಗ್ಲೆಂಡ್ ನಲ್ಲಿರುವ ಈ 'ಚೆನ್ನೈ ದೋಸಾ' ಶಾಪ್, ನಮ್ಮ ಕ್ರಿಕೆಟಿಗರಿಗೆ ಒಳ್ಳೆ ಅಡ್ಡಾ!

ಐಸಿಸಿ ವಿಶ್ವಕಪ್ ನಡೆಯುತ್ತಿರುವ ಇಂಗ್ಲೆಂಡಿನ ಸೌಥ್ಯಾಂಪ್ಟನ್ ನಲ್ಲಿರುವ ಚೈನ್ನೈ ದೋಸಾ ಶಾಪ್, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಒಳ್ಳೆ ಅಡ್ಡಾವಾಗಿ ಪರಿಣಮಿಸಿದೆ.
ಚೆನ್ನೈ ದೋಸಾ ಶಾಪ್
ಚೆನ್ನೈ ದೋಸಾ ಶಾಪ್
ಸೌಥ್ಯಾಂಪ್ಟನ್ : ಐಸಿಸಿ ವಿಶ್ವಕಪ್ ನಡೆಯುತ್ತಿರುವ ಇಂಗ್ಲೆಂಡಿನ ಸೌಥ್ಯಾಂಪ್ಟನ್ ನಲ್ಲಿರುವ  ಚೈನ್ನೈ ದೋಸಾ ಶಾಪ್,  ಟೀಂ ಇಂಡಿಯಾ ಕ್ರಿಕೆಟಿಗರಿಗೆ  ಒಳ್ಳೆ ಅಡ್ಡಾವಾಗಿ ಪರಿಣಮಿಸಿದೆ.
ವೀರೇಂದ್ರ ಸೆಹ್ವಾಗ್,  ಟೀಂ ಇಂಡಿಯಾ ಮುಖ್ಯ ಆಟಗಾರರ ಎಂಎಸ್ ಕೆ ಪ್ರಸಾದ್ ಸೇರಿದಂತೆ ಹಲವು ಆಟಗಾರರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕ್ರಿಕೆಟ್ ಪಂದ್ಯಗಳ  ಸಮಯದಲ್ಲಂತೂ ಇಲ್ಲಿ ಕಾಲಿಡುವುದಕ್ಕೂ ಜಾಗವಿರಲ್ಲ. ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. 
ಕೆಲ ದಿನಗಳ ಹಿಂದೆ ದಿನೇಶ್ ಕಾರ್ತಿಕ್ ಹಾಗೂ ವಿಜಯ್ ಶಂಕರ್ ಮತ್ತಿತರರು ಈ ಶಾಪ್ ಗೆ ಭೇಟಿ ನೀಡಿದ್ದರು. ಕಳೆದ ವರ್ಷ ಇಲ್ಲಿಯೇ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಕೆ.ಎಲ್. ರಾಹುಲ್ ಆರ್. ಅಶ್ವಿನ್ ಇಲ್ಲಿ ಅತಿಥಿಗಳಿಗೆ ದೋಸೆ ಬಡಿಸಿದ್ದರು.
ಚೆನ್ನೈ ದೋಸಾ ಇಲ್ಲಿರುವ ಅನೇಕ ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಒಂದಾಗಿದೆ. ಇದು ಭಾರತೀಯ ಆಟಗಾರರು ಹಾಗೂ ಅಭಿಮಾನಿಗಳಿಗೆ ನೆಚ್ಚಿನ ತಾಣವಾಗಿದೆ. ದೋಸೆ, ಇಡ್ಲಿ, ವಡೆ  ಮತ್ತಿತರ ದಕ್ಷಿಣ ಭಾರತೀಯ ಆಹಾರಗಳು ಇಲ್ಲಿ ದೊರೆಯುತ್ತದೆ. ಪರೋಟ ಹಾಗೂ ನಾನ್ಸ್ ಗೂ ಇಲ್ಲಿ ತುಂಬಾ ಬೇಡಿಕೆ ಇದೆ. 
ಸೌಥ್ಯಾಂಪ್ಟನ್ ನಗರದ ಹೃದಯ ಭಾಗದಲ್ಲಿರುವ ಚೆನ್ನೈ ದೋಸಾ ಶಾಪ್  ದರದಿಂದಾಗಿ ಪ್ರಸಿದ್ಧಿಯಾಗಿಲ್ಲ,ವೀಚೂ ಪರೋಟ, ಸೇರಿದಂತೆ ಉತ್ತರ ಭಾರತೀಯ ಆಹಾರಗಳು ಇಲ್ಲಿ ಲಭ್ಯವಾಗಲಿವೆ. ಇದಲ್ಲದೇ ತುನಾ ಮೀನು ಮಸಾಲೆ ದೋಸೆ ಕೂಡಾ ಸಾಕಷ್ಟು ಜನಪ್ರಿಯವಾಗಿದೆ. 
ಭಾರತೀಯರು ಹಾಗೂ ಇಂಗ್ಲೆಂಡಿನವರು ಇಬ್ಬರೂ ಕೂಡಾ ನಮ್ಮಗೆ ಗ್ರಾಹಕರು, ನಾವು ಸಿದ್ಧಪಡಿಸುವ ಆಹಾರವನ್ನು ಸವಿಯಲು ಇಷ್ಟಪಡುತ್ತಾರೆ. ಪಂದ್ಯಗಳ ಸಮಯದಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದ ಎಂದು  ಈ ಶಾಪ್ ನಡೆಸುತ್ತಿರುವ ಡೆವಿಡ್ ಡಿನಿಜ್ ಹೇಳುತ್ತಾರೆ. 
ಚೆನ್ನೈ ದೋಸಾ ಶಾಪ್ ಗೆ ತಮಿಳಿನ ಸಿದ್ ಎಂಬುವರು ಮಾಲೀಕರು, ಇದನ್ನು ಎರಡು ವರ್ಷಗಳ ಹಿಂದೆ ನಮಸ್ತೆ ಕೇರಳ ಎಂದು ಕರೆಯಲಾಗುತಿತ್ತು. ಕ್ರಿಕೆಟಿಗರಿಗಾಗಿ ಎಣ್ಣೆಯನ್ನು ಕಡಿಮೆ ಹಾಕಲಾಗುತ್ತದೆ ಎಂದು ಡೇವಿಡ್ ತಿಳಿಸಿದರು. 
ರಾಹುಲ್ ಹಾಗೂ ಅಶ್ವಿನ್ ಬಂದಾಗ ಎಣ್ಣೆ ಜಾಸ್ತಿ ಹಾಕದಂತೆ ಹೇಳಿದರಂತೆ. ದೋಸಾ, ಕೊತು ಪರೋಟಗಳಿಗಾಗಿ ದಕ್ಷಿಣ ಭಾರತದ ಆಟಗಾರರು ಬರುತ್ತಾರೆ. ಎಲ್ಲರನ್ನೂ ಸಂತೋಷದಿಂದ ನೋಡಿಕೊಳ್ಳಲಾಗುತ್ತದೆ. ವಿವಿಧ ಬಗೆಯ ಆಹಾರ ತಯಾರಿಸುವುದರಿಂದ ದಕ್ಷಿಣ ಹಾಗೂ ಉತ್ತರ ಭಾರತೀಯರು ಕೂಡಾ ಇಷ್ಟಪಡುತ್ತಾರೆ ಎಂದು ಡೇವಿಡ್ ಹೇಳಿದರು.
 ಜೂನ್ 22 ರಂದು ಅಪಘಾನಿಸ್ತಾನ ವಿರುದ್ಧ ಭಾರತ ಸೆಣಸಲಿದೆ. ಅಂದು ಕೂಡಾ ಈ ಶಾಪ್ ನಲ್ಲಿ ಭರ್ಜರಿ ವ್ಯಾಪಾರಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com