ವಿಶ್ವಕಪ್ 2019: ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನರ್ ನಿವಾಸಕ್ಕೆ ಟೀಂ ಇಂಡಿಯಾ ಭೇಟಿ

ಭಾನುವಾರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಸೆಣಸಲು ಸಜ್ಜಾಗಿರುವ ಟೀಂ ಇಂಡಿಯಾ, ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನರ್ ನಿವಾಸಕ್ಕೆ ಭೇಟಿ ನೀಡಿದೆ.

Published: 08th June 2019 12:00 PM  |   Last Updated: 10th June 2019 02:27 AM   |  A+A-


Team India with Indian High Commission

ಭಾರತೀಯ ಹೈಕಮೀಷನರ್ ಜೊತೆಗೆ ಟೀಂ ಇಂಡಿಯಾ

Posted By : ABN ABN
Source : The New Indian Express
ಲಂಡನ್ : ಭಾನುವಾರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ  ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಸೆಣಸಲು ಸಜ್ಜಾಗಿರುವ ಟೀಂ ಇಂಡಿಯಾ, ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನರ್ ನಿವಾಸಕ್ಕೆ ಭೇಟಿ ನೀಡಿದೆ.  

ಭಾರತೀಯ ಹೈ ಕಮೀಷನರ್ ರುಚಿ ಗಣಶ್ಯಾಮ್ ಅವರೊಂದಿಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರು, ಮುಖ್ಯ ತರಬೇತುದಾರ ರವಿಶಾಸ್ತ್ರೀ ಹಾಗೂ ಸಿಬ್ಬಂದಿ ವರ್ಗದವರು ಪೋಟೋ ತೆಗೆಸಿಕೊಂಡಿದ್ದಾರೆ

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷರ್ ನಿವಾಸದಲ್ಲಿ ಟೀಂ ಇಂಡಿಯಾ ಎಂಬ ಹ್ಯಾಷ್ ಟಾಗ್ ನಲ್ಲಿ ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಪೋಟೋ ಶೆರ್  ಮಾಡಲಾಗಿದೆ. 

ಇದಕ್ಕೂ ಮುನ್ನಾ ಮಳೆಯ ಕಾರಣದಿಂದಾಗಿ ಟೀಂ ಇಂಡಿಯಾ ತಾಲೀಮುನ್ನು ಸ್ಥಗಿತಗೊಳಿಸಿತ್ತು. 

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ಗಳ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿತ್ತು.ಭಾನುವಾರ ಒವೆಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ ಎದುರಿಸಲಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp