ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಅಸಿಫ್ ಆಲಿ 2 ವರ್ಷದ ಪುತ್ರಿ ಕ್ಯಾನ್ಸರ್ ನಿಂದ ಸಾವು!

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಆಸಿಫ್‌ ಅಲಿ ಅವರ ಎರಡು ವರ್ಷದ ಮಗಳು ನೂರ್‌ ಫಾತಿಮಾ ಅಮೆರಿಕಾದ .
ಅಸಿಫ್ ಅಲಿ
ಅಸಿಫ್ ಅಲಿ
ನವದೆಹಲಿ: ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಆಸಿಫ್‌ ಅಲಿ ಅವರ ಎರಡು ವರ್ಷದ ಮಗಳು ನೂರ್‌ ಫಾತಿಮಾ ಅಮೆರಿಕಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 
ಈ ಕುರಿತು ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ನ ಇಸ್ಲಾಮಾಬಾದ್‌ ಯುನೈಟೆಡ್‌ ಟ್ವಿಟ್‌ ಮಾಡಿದೆ. 2018ರ ಆವೃತ್ತಿಯಲ್ಲಿ ಇಸ್ಮಾಮಾಬಾದ್‌ ಯುನೈಟೆಡ್‌ ತಂಡ ಪ್ರತಿನಿಧಿಸಿದ್ದ ಆಸಿಫ್ ಅಲಿ ಅವರ ಪುತ್ರಿ ನಿಧನಕ್ಕೆ ಐಎಸ್‌ಎಲ್‌ಯು ತೀವ್ರ ಸಂತಾಪ ಸೂಚಿಸಿದೆ. ಪುತ್ರಿ ಕಳೆದುಕೊಂಡಿರುವ ದುಖಃವನ್ನು ಭರಿಸುವ ಶಕ್ತಿ ಆಸಿಫ್‌ ಹಾಗೂ ಅವರ ಕುಟುಂಬಕ್ಕೆ ದೇವರು ನೀಡಲಿ. ಅವರ ನೋವಿನೊಂದಿಗೆ ನಾವು ಜೊತೆಗಿದ್ದೇವೆ ಎಂದು  ಟ್ವಿಟ್‌ ಮಾಡಿದೆ.
ಆಸೀಫ್‌ ಅಲಿ ಭಾನುವಾರವಷ್ಟೇ ಮುಕ್ತಾಯವಾದ ಇಂಗ್ಲೆಂಡ್‌ ಪ್ರವಾಸದಲ್ಲಿದ್ದರು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 0-4 ಅಂತರದಲ್ಲಿ ಸೋಲು ಅನುಭವಿಸಿತ್ತು. ಇಂಗ್ಲೆಂಡ್‌ ಪ್ರವಾಸಕ್ಕೂ ಹೊರಡುವ ಮೊದಲು ಆಸಿಪ್‌ ಅಲಿ " ನನ್ನ ಮಗಳು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಕೆಯನ್ನು ಅಮೆರಿಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಟ್ವೀಟ್‌ ಮಾಡಿದ್ದರು.
ಜತೆಗೆ, ತನ್ನ ಮಗಳಿಗೆ ಕಡಿಮೆ ಅವಧಿಯಲ್ಲಿ ವೀಸಾ ನಿಡಿದ ಯುಎಸ್‌ ಪ್ರಾಧಿಕಾರಕ್ಕೆ ಧನ್ಯವಾದಗಳನ್ನು ಪಾಕ್‌ ಬ್ಯಾಟ್ಸ್‌ಮನ್‌ ಅರ್ಪಿಸಿದ್ದರು. ಇದೇ ಮೇ 30 ರಂದು ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ ಟೂರ್ನಿಗೆ 15 ಆಟಗಾರರ ಪಾಕಿಸ್ತಾನ ತಂಡದಲ್ಲಿ ಆಸಿಫ್‌ ಅಲಿ ಅವರಿಗೆ ಸ್ಥಾನ ನೀಡಿರಲಿಲ್ಲ. ಆದರೆ, ಮೇ. 23ರವರೆಗೂ ತಂಡದಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಹಾಗಾಗಿ, ಕೊನೆಯ ಕ್ಷಣದಲ್ಲಾದರೂ ಆಸಿಫ್‌ ಅಲಿಗೆ ತಂಡದಲ್ಲಿ ಅವಕಾಶ ನೀಡಬಹುದು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com