ದೀಪಕ್ ಚಹಾರ್ ಸಿಕ್ಸರ್, ಬಾಂಗ್ಲಾ ಪಂಕ್ಚರ್: ಭಾರತಕ್ಕೆ ಸರಣಿ

ಯುವ ಆಟಗಾರ ಶ್ರೇಯಸ್ ಅಯ್ಯರ್ (62) ಅರ್ಧಶತಕ ಹಾಗೂ ದೀಪಕ್ ಚಹಾರ್ (7ಕ್ಕೆ 6 ) ಹ್ಯಾಟ್ರಿಕ್ ಸೇರಿದಂತೆ ಆರು ವಿಕೆಟ್ ಪಡೆದ ಭರ್ಜರಿ ಪ್ರದರ್ಶನದ ಬಲದಿಂದ ಬಾಂಗ್ಲಾ ವಿರುದ್ಧದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 30 ರನ್ ಗಳಿಂದ ಗೆದ್ದಿದೆ. 

Published: 11th November 2019 12:25 AM  |   Last Updated: 11th November 2019 04:14 PM   |  A+A-


India vs Bangladesh 3rd T20I: Deepak Chahar Claims Hat-Trick As India Clinch Series 2-1

ದೀಪಕ್ ಚಹಾರ್ ಸಿಕ್ಸರ್, ಬಾಂಗ್ಲಾ ಪಂಕ್ಚರ್: ಭಾರತಕ್ಕೆ ಸರಣಿ

Posted By : Srinivas Rao BV
Source : Online Desk

ನಾಗಪುರ್: ಯುವ ಆಟಗಾರ ಶ್ರೇಯಸ್ ಅಯ್ಯರ್ (62) ಅರ್ಧಶತಕ ಹಾಗೂ ದೀಪಕ್ ಚಹಾರ್ (7ಕ್ಕೆ 6 ) ಹ್ಯಾಟ್ರಿಕ್ ಸೇರಿದಂತೆ ಆರು ವಿಕೆಟ್ ಪಡೆದ ಭರ್ಜರಿ ಪ್ರದರ್ಶನದ ಬಲದಿಂದ ಬಾಂಗ್ಲಾ ವಿರುದ್ಧದ 3ನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 30 ರನ್ ಗಳಿಂದ ಗೆದ್ದಿದೆ. 

ಈ ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ರೋಹಿತ್ ಶರ್ಮಾ (2) ಹಾಗೂ ಶಿಖರ್ ಧವನ್ (19) ರನ್ ಕಲೆ ಹಾಕುವಲ್ಲಿ ವಿಫಲರಾದರು. 35 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. 

Stay up to date on all the latest ಕ್ರಿಕೆಟ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp