ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್: ಕೊಹ್ಲಿ 136, ಭಾರತ 9ಕ್ಕೆ 347 ಡಿಕ್ಲೇರ್, 241 ರನ್ ಮುನ್ನಡೆ

ನಾಯಕ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅವರ ಅರ್ಧಶತಕದ ಬಲದಿಂದ ಭಾರತ ತಂಡ ಐತಿಹಾಸಿಕ ಗುಲಾಬಿ ಟೆಸ್ಟ್ ನಲ್ಲಿ 9 ವಿಕೆಟ್ ಗೆ 347 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಅಲ್ಲದೆ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಪಡೆ ಬಾಂಗ್ಲಾದೇಶ ವಿರುದ್ಧ 241 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಕೋಲ್ಕತ್ತಾ: ನಾಯಕ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅವರ ಅರ್ಧಶತಕದ ಬಲದಿಂದ ಭಾರತ ತಂಡ ಐತಿಹಾಸಿಕ ಗುಲಾಬಿ ಟೆಸ್ಟ್ ನಲ್ಲಿ 9 ವಿಕೆಟ್ ಗೆ 347 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಅಲ್ಲದೆ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಪಡೆ ಬಾಂಗ್ಲಾದೇಶ ವಿರುದ್ಧ 241 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 

ಶನಿವಾರ ಎರಡನೇ ದಿನದ ಆಟ 3 ವಿಕೆಟ್ ಗೆ 174 ರನ್ ಗಳಿಂದ ಆರಂಭಿಸಿದ ಭಾರತದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಬಾಂಗ್ಲಾ ಬೌಲರ್ ಗಳನ್ನು ಕಾಡಿತು. ಅಲ್ಲದೆ ನಾಲ್ಕನೇ ವಿಕೆಟ್ ಗೆ 99 ರನ್ ಗಳ ಜೊತೆಯಾಟವನ್ನು ನೀಡಿತು. ಅಜಿಂಕ್ಯ 69 ಎಸೆತಗಳಲ್ಲಿ 51 ರನ್ ಬಾರಿಸಿದರು.

ಬಾಂಗ್ಲಾ ಪರ ಬೌಲಿಂಗ್ ನಲ್ಲಿ ಅಮೀನ್ ಹುಸೇನ್ ಮತ್ತು ಇಬಾದತ್ ಹುಸೇನ್ ತಲಾ 3 ವಿಕೆಟ್ ಹಾಗೂ ಅಬು ಜಯೆದ್ 2 ವಿಕೆಟ್ ಪಡೆದಿದ್ದಾರೆ. 

ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ 106 ರನ್ ಗಳಿಗೆ ಆಲೌಟ್ ಆಗಿತ್ತು. ಬಾಂಗ್ಲಾ ಪರ ಇಸ್ಲಾಂ 29, ಲಿಟನ್ ದಾಸ್ 24 ಮತ್ತು ನಯಿಮ್ ಹಸನ್ 19  ರನ್ ಪೇರಿಸಿದ್ದು ಇನ್ನು ರ್ಯಾರು ಎರಡು ಅಂಕಿಯನ್ನು ಸಹ ದಾಟಲಿಲ್ಲ.

ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಮತ್ತು ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com