ಕಳಪೆ ಪ್ರದರ್ಶನ: ಡಕ್ ಔಟ್‍ನೊಂದಿಗೆ ದಿಲ್ಷಾನ್ ದಾಖಲೆ ಸರಿಗಟ್ಟಿದ ಉಮರ್ ಅಕ್ಮಲ್

ಪಾಕಿಸ್ತಾನ ತಂಡದ ಉಮರ್ ಅಕ್ಮಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜತೆ ಅನಗತ್ಯ ದಾಖಲೆಗೆ ಅಕ್ಮಲ್ ಭಾಜನರಾಗಿದ್ದಾರೆ.

Published: 08th October 2019 12:34 PM  |   Last Updated: 08th October 2019 12:34 PM   |  A+A-


Pakistan's Umar Akmal creates embarrassing record

ಕಳಪೆ ಪ್ರದರ್ಶನ: ಡಕ್ ಔಟ್‍ನೊಂದಿಗೆ ದಿಲ್ಷಾನ್ ದಾಖಲೆ ಸರಿಗಟ್ಟಿದ ಉಮರ್ ಅಕ್ಮಲ್

Posted By : Manjula VN
Source : UNI

ಲಾಹೋರ್: ಪಾಕಿಸ್ತಾನ ತಂಡದ ಉಮರ್ ಅಕ್ಮಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜತೆ ಅನಗತ್ಯ ದಾಖಲೆಗೆ ಅಕ್ಮಲ್ ಭಾಜನರಾಗಿದ್ದಾರೆ.

ಉಮರ್ ಅಕ್ಮಲ್ ಅವರು ಟಿ-20 ಕ್ರಿಕೆಟ್ ನಲ್ಲಿ 19 ಬಾರಿ ಶೂನ್ಯಕ್ಕೆ ಔಟ್ ಆಗಿರುವ ದಿಲ್ಷಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೊದಲನೇ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ಅಕ್ಮಲ್ ಅವರು ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರನ್ನು ಹಿಂದಿಕ್ಕಿದ್ದರು.

ಈ ಪಂದ್ಯದಲಿ ಪಾಕಿಸ್ತಾನ ತಂಡ 35 ರನ್‍ಗಳಿಂದ ಶ್ರೀಲಂಕಾ ವಿರುದ್ಧ ಸೋತು ಚುಟುಕು ಸರಣಿಯನ್ನು 0-2 ಅಂತರದಲ್ಲಿ ಬಿಟ್ಟುಕೊಟ್ಟಿತು. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶ್ರೀಲಂಕಾ ತಂಡ ಮೂರು ಪಂದ್ಯಗಳ ಟಿ-20 ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp