ನಂ.1 ತಂಡಕ್ಕೆ ಮಣ್ಣು ಮುಕ್ಕಿಸಿದ ಲಂಕಾ, ಆಕ್ರೋಶಿತ ಅಭಿಮಾನಿಗಳಿಂದ ಪಾಕ್ ನಾಯಕನ ಕಟೌಟ್ ಗೆ ಪಂಚ್, ವಿಡಿಯೋ!
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಂಬರ್ 1 ತಂಡ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ತವರು ನೆಲದಲ್ಲೇ ಶ್ರೀಲಂಕಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಮಣ್ಣು ಮುಕ್ಕಿಸಿದ್ದು ಇದರಿಂದ ಆಕ್ರೋಶಿತಗೊಂಡ ಪಾಕ್ ಅಭಿಮಾನಿಗಳು...
Published: 11th October 2019 11:26 AM | Last Updated: 11th October 2019 11:42 AM | A+A A-

ಸರ್ಫರಾಜ್ ಅಹ್ಮದ್
ಲಾಹೋರ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಂಬರ್ 1 ತಂಡ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ತವರು ನೆಲದಲ್ಲೇ ಶ್ರೀಲಂಕಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಮಣ್ಣು ಮುಕ್ಕಿಸಿದ್ದು ಇದರಿಂದ ಆಕ್ರೋಶಿತಗೊಂಡ ಪಾಕ್ ಅಭಿಮಾನಿಗಳು ನಾಯಕ ಸರ್ಫರಾಜ್ ಅಹ್ಮದ್ ಕಟೌಟ್ ಅನ್ನು ಮುರಿದು ಹಾಕಿ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ.
ಸರಣಿ ಸೋಲಿನ ಬಳಿಕ ಮೈದಾನದಿಂದ ಹೊರಬಂದ ಅಭಿಮಾನಿಗಳು ಸ್ಟೇಡಿಯಂ ಮುಂದೆ ಹಾಕಲಾಗಿದ್ದ ಸರ್ಫರಾಜ್ ಅಹ್ಮದ್ ಅವರ ಕಟೌಟ್ ಅನ್ನು ಕೈ-ಕಾಲಿನಿಂದ ಒದ್ದು ಮುರಿದು ನಾಯಕನ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಪೇರಿಸಿತ್ತು. 148 ರನ್ ಗಳ ಗುರಿ ಬೆನ್ನಟ್ಟಿದ ಪಾಕ್ ತಂಡ ನಿಗದಿತ ಓವರ್ ನಲ್ಲಿ 136 ರನ್ ನಷ್ಟೇ ಪೇರಿಸಿ 13 ರನ್ ಗಳಿಂದ ಲಂಕಾಗೆ ಶರಣಾಯಿತು.
ಪಾಕ್ ನೆಲದಲ್ಲಿ 10 ವರ್ಷಗಳ ಬಳಿಕ ಕ್ರಿಕೆಟ್ ಟೂರ್ನಿಯೊಂದು ಆಯೋಜನೆಗೊಂಡಿತ್ತು. ಇನ್ನು ಪಾಕ್ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟಿದ್ದು ಸೋಲಿನಿಂದ ಸದ್ಯ ಅಭಿಮಾನಿಗಳು ಆಕ್ರೋಶದ ಬುಗ್ಗೆಗಳಾಗಿದ್ದಾರೆ.
A fan not happy with Sarfaraz Ahmed after the 3-0 loss to Sri Lanka #PAKvSL #Cricket pic.twitter.com/S6Biri8z4f
— Saj Sadiq (@Saj_PakPassion) 10 October 2019