ತಾವು ಯಶಸ್ವಿ ಬ್ಯಾಟ್ಸ್ ಮನ್ ಆಗಲು ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ!

ಭಾರತ ತಂಡದ ಯಶಸ್ವಿ ನಾಯಕನಾಗಿ ಮುನ್ನಡೆಯುತ್ತಿರುವ ವಿರಾಟ್ ಕೊಹ್ಲಿ ಅವರು ತಮ್ಮ ಫಿಟ್ನೆಸ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ. "ನೆಟ್‍ಫ್ಲಿಕ್ಸ್ ನಲ್ಲಿ ಗೇಮ್ ಚೇಂಜರ್ಸ್‍ಗಳನ್ನು ನೋಡಿದ್ದೇನೆ. ಇಷ್ಟು ದಿನಗಳ ಕಾಲ ಆಹಾರದ ವಿಚಾರದಲ್ಲಿ ನಾನು ಅನುಸರಿಸಿರುವ ಮಾರ್ಗದ ಕುರಿತಾಗಿ ಅಥಿಟ್‍ಗಳಿಂದ ಅರಿತುಕೊಂಡಿದ್ದೇನೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಭಾರತ ತಂಡದ ಯಶಸ್ವಿ ನಾಯಕನಾಗಿ ಮುನ್ನಡೆಯುತ್ತಿರುವ ವಿರಾಟ್ ಕೊಹ್ಲಿ ಅವರು ತಮ್ಮ ಫಿಟ್ನೆಸ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ತಾವು ಸಸ್ಯಹಾರಿ ಆಗಿರುವ ಕುರಿತು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ-20 ಮೂರೂ ಮಾದರಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಆಟಗಾರರಲ್ಲಿ ಮುಂಚೂಣಿ ಸಾಲಿನಲ್ಲಿ ವಿರಾಟ್ ಕೊಹ್ಲಿ ನಿಲ್ಲುತ್ತಾರೆ. ವಿಶ್ವ ಕ್ರಿಕೆಟ್‍ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಷ್ಟೆಲ್ಲ ಹೇಗೆ ಸಾಧ್ಯ ಎಂಬುದು ಹಲವರಲ್ಲಿ ಪ್ರಶ್ನೆ ಕಾಡಿರಬಹುದು. ಇದೀಗ ಅವರ ರಹಸ್ಯವನ್ನು ರನ್ ಮಷೀನ್ ಬಿಟ್ಟುಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನೆಟ್‍ಫ್ಲಿಕ್ಸ್ ನಲ್ಲಿ ಗೇಮ್ ಚೇಂಜರ್ಸ್‍ಗಳನ್ನು ನೋಡಿದ್ದೇನೆ. ಇಷ್ಟು ದಿನಗಳ ಕಾಲ ಆಹಾರದ ವಿಚಾರದಲ್ಲಿ ನಾನು ಅನುಸರಿಸಿರುವ ಮಾರ್ಗದ ಕುರಿತಾಗಿ ಅಥಿಟ್‍ಗಳಿಂದ ಅರಿತುಕೊಂಡಿದ್ದೇನೆ. ಇದೊಂದು ಅದ್ಭುತ ಡಾಕ್ಯುಮೆಂಟರಿ ಹಾಗೂ ನಾನು ಸಸ್ಯಹಾರಿಯಾಗಿ ಬದಲಾದ ಬಳಿಕ ಇದಕ್ಕಿಂತ ಉತ್ತಮವಾದದ್ದು ಮತ್ತೊಂದಿಲ್ಲ ಎಂದೆನಿಸಿದೆ" ಎಂದು ಬರೆದುಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಆರಂಭಿಕ ದಿನಗಳಲ್ಲಿ ಚಿಕನ್‍ನೊಂದಿಗೆ ಸುದ್ದಿಗೋಷ್ಠಿ ನಡೆಸಿರುವ ಹಲವು ಉದಾಹರಣೆಗಳಿವೆ. 2013ರ ಒಳಗೆ ಕೊಹ್ಲಿ ಫಿಟ್ನೆಸ್‍ಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡಿರಲಿಲ್ಲ. ಹಾಗಾಗಿ, ಅವರ ದೇಹದ ತೂಕ ಹೆಚ್ಚಾಗಿತ್ತು. 2013ರ ನಂತರ ಅವರು ಫಿಟ್ನೆಸ್, ಆಹಾರ ಪದ್ಧತಿ ಹಾಗೂ ತರಬೇತಿ ಮೇಲೆ ಹೆಚ್ಚಿನ ಗಮನ ಕೇಂದ್ರಕರಿಸಿದರು.

ಇದೀಗ ಅವರು ಡಯಟ್ ವಿಚಾರದಲ್ಲಿ ಸಾಕಷ್ಟು ಸಮಯ ಪ್ರಜ್ಞೆ ಹೊಂದಿದ್ದಾರೆ. ಕ್ರೀಡಾಂಗಣದ ಹೊರಗೂ ಅವರ ಬದಲಾವಣೆಗಳನ್ನು ಕಾಣಬಹುದಾಗಿದೆ. ಪ್ರಸ್ತುತ ತಲೆಮಾರಿನ ವಿಶ್ವದ ಅಥ್ಲಿಟ್‍ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಪ್ರಮುಖರಾಗಿ ಹೊರಹೊಮ್ಮಿದ್ದಾರೆ. 

ಮಂಗಳವಾರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 202 ರನ್‍ಗಳ ಅಂತರದಲ್ಲಿ ಗೆದ್ದು ಟೆಸ್ಟ್ ಸರಣಿಯನ್ನು 3-0 ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಹರಿಣಗಳ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಸರಣೀ ಕ್ಲೀನ್ ಸ್ವೀಪ್ ಮಾಡಿಕೊಂಡು ಇತಿಹಾಸ  ಸೃಷ್ಟಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com