ಕೊಹ್ಲಿ ಎಡವಿದಿದ್ರೆ ಜಸ್‌ಪ್ರೀತ್ ಬುಮ್ರಾ ಹ್ಯಾಟ್ರಿಕ್‌ ವಿಕೆಟ್‌ ಕನಸು ನುಚ್ಚುನೂರಾಗ್ತಿತ್ತು, ವಿಡಿಯೋ ವೈರಲ್!

ವಿಂಡೀಸ್ ತಂಡಕ್ಕೆ ಭಾರತದ ಜಸ್ಪ್ರಿತ್ ಬುಮ್ರಾ ಶಾಕ್ ನೀಡಿದರು. ತಂಡದ ಮೊತ್ತ 9 ರನ್ ಇರುವಾಗ ಜಾನ್ ಕ್ಯಾಂಪ್ ಬೆಲ್ ಅವರನ್ನು ಔಟ್ ಮಾಡಿದರು. ನಂತರ ಒಂಬತ್ತನೇ ಓವರ್ ಕೈಗೆತ್ತಿಕೊಂಡ ಬುಮ್ರಾ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬೌಲಿಂಗ್ ಮಾಡಿದರು.
ವಿರಾಟ್ ಕೊಹ್ಲಿ-ಬುಮ್ರಾ
ವಿರಾಟ್ ಕೊಹ್ಲಿ-ಬುಮ್ರಾ

ಜಮೈಕಾ: ವಿಂಡೀಸ್ ತಂಡಕ್ಕೆ ಭಾರತದ ಜಸ್ಪ್ರಿತ್ ಬುಮ್ರಾ ಶಾಕ್ ನೀಡಿದರು. ತಂಡದ ಮೊತ್ತ 9 ರನ್ ಇರುವಾಗ ಜಾನ್ ಕ್ಯಾಂಪ್ ಬೆಲ್ ಅವರನ್ನು ಔಟ್ ಮಾಡಿದರು. ನಂತರ ಒಂಬತ್ತನೇ ಓವರ್ ಕೈಗೆತ್ತಿಕೊಂಡ ಬುಮ್ರಾ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬೌಲಿಂಗ್ ಮಾಡಿದರು.

ಬುಮ್ರಾ ಅವರು ತಂಡದ ಮೊತ್ತ 13 ರನ್ ಇರುವಾಗ ಡೆರೆನ್ ಬ್ರಾವೊ(4), ಶಮರಹ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅವರನ್ನು ಶೂನ್ಯಕ್ಕೆ ಸೇರಿದಂತೆ ಹ್ಯಾಟ್ರಿಕ್ ವಿಕೆಟ್ ಪಡೆದರು. ರೋಸ್ಟನ್ ಚೇಸ್ ರನ್ನು ಬುಮ್ರಾ ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ವೇಳೆ ಅಂಪೈರ್ ನಾಟೌಟ್ ನೀಡಿದ್ದರಿಂದ ಕೂಡಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಮನವಿ ಮಾಡಿದರು. ಅಂಪೈರು ತೀರ್ಪು ಮರುಪರಿಶೀಲನೆ ವೇಳೆ ಚೇಸ್ ಔಟಾಗಿದ್ದು ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. 

ಹರ್ಭಜನ್ ಸಿಂಗ್(2001-ಆಸ್ಟ್ರೇಲಿಯಾ ವಿರುದ್ಧ) ಹಾಗೂ ಇರ್ಫಾನ್ ಪಠಾಣ್ (2006-ಪಾಕಿಸ್ತಾನದ ವಿರುದ್ಧ) ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೂರನೇ ಭಾರತದ ಬೌಲರ್ ಎಂಬ ಸಾಧನೆಗೆ ಬುಮ್ರಾ ಭಾಜನರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com