ಕ್ರಿಕೆಟ್ ದಂತಕತೆ ಕಪಿಲ್‌ ದೇವ್‌ ದಾಖಲೆ ಮುರಿದು ಮೈಲಿಗಲ್ಲು ಸೃಷ್ಟಿಸಿದ ಇಶಾಂತ್‌ ಶರ್ಮಾ

ಏಷ್ಯಾ ಹೊರಗಡೆ  ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಭಾರತದ ಬೌಲರ್‌ ಎಂಬ ನೂತನ ಮೈಲಿಗಲ್ಲನ್ನು ಟೀಮ್‌ ಇಂಡಿಯಾ ವೇಗಿ ಇಶಾಂತ್‌ ಶರ್ಮಾ ಸೃಷ್ಟಿಸಿದ್ದಾರೆ.

Published: 02nd September 2019 06:55 PM  |   Last Updated: 02nd September 2019 06:55 PM   |  A+A-


Kapil Dev-Ishant Sharma

ಕಪಿಲ್ ದೇವ್-ಇಶಾಂತ್ ಶರ್ಮಾ

Posted By : Vishwanath S
Source : Online Desk

ಜಮೈಕಾ: ಏಷ್ಯಾ ಹೊರಗಡೆ  ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಭಾರತದ ಬೌಲರ್‌ ಎಂಬ ನೂತನ ಮೈಲಿಗಲ್ಲನ್ನು ಟೀಮ್‌ ಇಂಡಿಯಾ ವೇಗಿ ಇಶಾಂತ್‌ ಶರ್ಮಾ ಸೃಷ್ಟಿಸಿದ್ದಾರೆ.

ಮೂರನೇ ದಿನ ಭಾನುವಾರ ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಇಶಾಂತ್‌ ಶರ್ಮಾ ಅವರು ಜಹ್ಮಾರ್‌ ಅವರ ವಿಕೆಟ್‌ ಉರುಳಿಸುತ್ತಿದ್ದ ಹಾಗೆ ಏಷ್ಯಾ ಹೊರಗಡೆ ಅತಿ ಹೆಚ್ಚು ವಿಕೆಟ್‌ ಪಡೆದಿದ್ದ ಮಾಜಿ ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ (155 ವಿಕೆಟ್‌ಗಳು) ಅವರ ದಾಖಲೆಯನ್ನು ಹಿಂದಿಕ್ಕಿದರು. ವೆಸ್ಟ್ ಇಂಡೀಸ್‌ ಪ್ರಥಮ ಇನಿಂಗ್ಸ್‌ನಲ್ಲಿ 117 ರನ್‌ಗಳಿಗೆ ಆಲ್‌ಔಟ್‌ ಆಯಿತು.

31ರ ಪ್ರಾಯದ ಇಶಾಂತ್‌ ಶರ್ಮಾ ಅವರು ಏಷ್ಯಾ ಹೊರಗಡೆ 46 ಟೆಸ್ಟ್‌ ಪಂದ್ಯಗಳಿಂದ 33.2 ಸರಾಸರಿಯಲ್ಲಿ 157 ವಿಕೆಟ್‌ ಪಡೆದಿದ್ದಾರೆ. ಭಾರತದ ಸ್ಪಿನ್‌ ದಂತಕತೆ ಅನಿಲ್‌ ಕುಬ್ಳೆ 50 ಪಂದ್ಯಗಳಿಂದ 200 ವಿಕೆಟ್‌ ಕಬಳಿಸಿದ್ದಾರೆ. ಇಶಾಂತ್ ಶರ್ಮಾ ಇದುವರೆಗೂ 92 ಟೆಸ್ಟ್‌ ಪಂದ್ಯಗಳಿಂದ 165 ವಿಕೆಟ್‌ ಪಡೆದಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp