ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇಂದು ಮರೆಯಲಾಗದ ದಿನ?

ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇಂದು ಮರೆಯಲಾಗದ ದಿನವಾಗಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿ ಇತಿಹಾಸ ಬರೆದಿದ್ದರು.
ಯುವಿ ಆರು ಸಿಕ್ಸರ್
ಯುವಿ ಆರು ಸಿಕ್ಸರ್

ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿ ಇತಿಹಾಸ ಬರೆದಿದ್ದ ಯುವರಾಜ್ ಸಿಂಗ್

ನವದೆಹಲಿ: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇಂದು ಮರೆಯಲಾಗದ ದಿನವಾಗಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿ ಇತಿಹಾಸ ಬರೆದಿದ್ದರು.

2007ರ ಸೆ. 19ರ ದಿನಾಂಕವನ್ನು ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಇದೇ ದಿನ ಅಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರು ಟಿ-20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಮಾಡಿದ್ದರು. ಈ ಸಾಧನೆಗೆ ಇಂದಿಗೆ 12 ವರ್ಷಗಳ ಪೂರ್ಣಗೊಂಡಿವೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮೊದಲ ಟಿ-20 ವಿಶ್ವಕಪ್ ಅದಾಗಿತ್ತು. 2007ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲೇ ರಾಹುಲ್‌ ದ್ರಾವಿಡ್‌ ನಾಯಕತ್ವದ ಭಾರತ ಸೋತು ಆಘಾತಕ್ಕೆ ಒಳಗಾಗಿತ್ತು. ಇದಾದ ಕೆಲವೇ ದಿನಗಳ ನಂತರ ಭಾರತ ತಂಡದ ನಾಯಕತ್ವ ಪಡೆದ ಮಹೇಂದ್ರ ಸಿಂಗ್‌ ಧೋನಿ ದೇಶಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಸಮರ್ಪಿಸಿದ್ದರು.

ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್‌ ತಂಡದ ವಿರುದ್ಧ ಗದ್ದು ಸೆಮಿಫೈನಲ್‌ ಹಾದಿಯನ್ನು ಜೀವಂತವಾಗಿರಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 18 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಈ ವೇಳೆ ಕ್ರೀಸ್‌ನಲ್ಲಿ ಯುವರಾಜ್‌ ಸಿಂಗ್‌ ಹಾಗೂ ಮಹೇಂದ್ರ ಸಿಂಗ್‌ ತಂಡದ ಮೊತ್ತವನ್ನು ಏರಿಸುವ ಯೋಜನೆಯಲ್ಲಿದ್ದರು. 

ಇದೇ ಸಮಯದಲ್ಲಿ  ಇನ್ನಿಂಗ್ಸ್ ನ 18ನೋ ಓವರ್ ನಲ್ಲಿ ಯುವಿ ಸತತ ಎರಡು ಬೌಂಡರಿ ಸಿಡಿಸಿದ್ದರು. ಇದು ಇಂಗ್ಲೆಂಡ್ ತಂಡದ ಆ್ಯಂಡ್ರ್ಯೂ ಫ್ಲಿಂಟಾಫ್ ಕೆಣಕುವಂತೆ ಮಾಡಿತ್ತು. ಯುವಿ ಬಳಿ ಬಂದ ಫ್ಲಿಂಟಾಫ್ ಯುವರಾಜ್ ಸಿಂಗ್ ರನ್ನು ಕೆಣಕಿದ್ದರು. ಕೆಲ ಕ್ಷಣಗಳಲ್ಲೇ ಇಬ್ಬರ ವಾಗ್ಯುದ್ಧ ಮಿತಿ ಮೀರುತ್ತಿದೆ ಎನ್ನುವಾಗ ಮಧ್ಯ ಪ್ರವೇಶಸಿದ್ದ ಧೋನಿ ಯುವಿಯನ್ನು ಸಮಾಧಾನ ಪಡಿಸಿದ್ದರು. ಆದರೆ ಆ ಬಳಿಕದ ಓವರ್ ನಲ್ಲಿಯೇ ಯುವರಾಜ್ ಸಿಂಗ್ ತಮ್ಮ ವಿಶ್ವರೂಪ ತೋರಿಸಿದ್ದರು. 19ನೇ ಓವರ್ ನಲ್ಲಿ ಸ್ಟುವರ್ಟ್ ಬ್ರಾಡ್ ಯುವಿ ಕೋಪಕ್ಕೆ ತುತ್ತಾಗಿದ್ದರು. 

ಬ್ರಾಡ್ ಎಸೆದ ಆ ಓವರ್ ನ ಆರೂ ಎಸೆತಗಳನ್ನು ಯುವಿ ಸಿಕ್ಸರ್ ಗೆರೆ ದಾಟಿಸಿ ಇತಿಹಾಸ ನಿರ್ಮಿಸಿದ್ದರು. ಭಾರತೀಯ ಕ್ರಿಕೆಟ್ ನ ಈ ಐತಿಹಾಸಿಕ ಘಟನೆ ನಡೆದು ಇಂದಿಗೆ 12 ವರ್ಷಗಳ ಪೂರ್ಣಗೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com