ವಿರಾಟ್‌ ನಾಯಕತ್ವದ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟ ಗಂಭೀರ್‌   

ಮಹೇಂದ್ರ ಸಿಂಗ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರ ಉಪಸ್ಥಿತಿ ವಿರಾಟ್‌ ಕೊಹ್ಲಿ ಅವರು ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಲು ಸಹಕಾರಿಯಾಗುತ್ತದೆ.

Published: 20th September 2019 11:14 AM  |   Last Updated: 20th September 2019 11:14 AM   |  A+A-


Gautam Gambhir takes dig at Kohli, labels Rohit, Dhoni as reasons behind his captaincy success for India

ವಿರಾಟ್‌ ನಾಯಕತ್ವದ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟ ಗಂಭೀರ್‌

Posted By : Srinivas Rao BV
Source : UNI

ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರ ಉಪಸ್ಥಿತಿ ವಿರಾಟ್‌ ಕೊಹ್ಲಿ ಅವರು ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಲು ಸಹಕಾರಿಯಾಗುತ್ತದೆ ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಸಂಸದ ಗೌತಮ್‌ ಗಂಭೀರ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

"ಕಳೆದ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇನ್ನೂ ಅವರು ಹೆಚ್ಚು ಅನುಭವವಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರಾಟ್ ಕೊಹ್ಲಿ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಾರೆ. ಏಕೆಂದರೆ ಅವರೊಂದಿಗೆ ರೋಹಿತ್‌ ಶರ್ಮಾ ಹಾಗೂ ಮಹೇಂದ್ರ ಸಿಂಗ್‌ ಇದ್ದಾರೆ ಎಂದರು.

ವಿರಾಟ್‌ ಕೊಹ್ಲಿ ಸ್ವತಂತ್ರವಾಗಿ ತಂಡವನ್ನು ಮುನ್ನಡೆಸಿದಾಗ ಅವರ ನಾಯಕತ್ವದ ಪರಿಪಕ್ಷತೆ ನಮಗೆ ಅರಿವಾಗುತ್ತದೆ. ರೋಹಿತ್‌ ಶರ್ಮಾ ಹಾಗೂ ಮಹೇಂದ್ರ ಸಿಂಗ್‌ ಧೋನಿ ಅವರ ಅನುಪಸ್ಥಿಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫ್ರಾಂಚೈಸಿ ತಂಡ ಆರ್‌ಸಿಬಿ ತಂಡವನ್ನು ಅವರು ಮುನ್ನಡೆಸಿದಾಗ ಅವರ ನಾಯಕತ್ವದ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಗಂಭೀರ್‌ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp