ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಕೇಳಿದ್ದರೆ ವಾಸಿಂ ಅಕ್ರಮ್ ನ್ನು ಕೊಲ್ಲುತ್ತಿದ್ದೆ: ಶೋಯೆಬ್ ಅಖ್ತರ್

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ವಾಸಿಂ ಅಕ್ರಮ್ ಬಗ್ಗೆ ಬೆಚ್ಚಿಬೀಳಿಸುವಂತಹ ಹೇಳಿಕೆ ನೀಡಿದ್ದಾರೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್
Updated on: 

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ವಾಸಿಂ ಅಕ್ರಮ್ ಬಗ್ಗೆ ಬೆಚ್ಚಿಬೀಳಿಸುವಂತಹ ಹೇಳಿಕೆ ನೀಡಿದ್ದಾರೆ. ವಾಸಿಂ ಅಕ್ರಮ್ ಏನಾದರೂ ನನ್ನನ್ನು ಮ್ಯಾಚ್ ಫಿಕ್ಸಿಂಗ್ ವಿಷಯದಲ್ಲಿ ಕೇಳಿದ್ದರೆ ನಾನು ಆತನನ್ನು ನಿರ್ನಾಮ ಮಾಡುತ್ತಿದ್ದೆ ಅಥವಾ ಕೊಲ್ಲುತ್ತಿದ್ದೆ ಎಂದು ಶೋಯೆಬ್ ಅಖ್ತರ್ ಹೇಳ್ದಿದಾರೆ. 

1990 ರ ಕೆಲವು ಪಂದ್ಯಗಳನ್ನು ನೋಡುತ್ತಿದ್ದೆ. ಅವುಗಳಲ್ಲಿ ವಾಸಿಂ ಅಕ್ರಮ್ ತಮ್ಮ ಚಾಣಾಕ್ಷ ಬೌಲಿಂಗ್ ನಿಂದ ಪಾಕಿಸ್ತಾನವನ್ನು ಸಂಕಷ್ಟದ ಸ್ಥಿತಿಗಳಲ್ಲಿ ಮೇಲೆತ್ತಿದರು ಎಂಬುದನ್ನು ಕಂಡು ನಾನು ಆಶ್ಚರ್ಯಚಕಿತನಾದೆ ಎಂದು ಟಿ.ವಿ ಶೋ ಒಂದರಲ್ಲಿ ಶೋಯೆಬ್ ಅಖ್ತರ್ ಹೇಳಿದ್ದಾರೆ.  

ನಾನು ಸ್ಪಷ್ಟವಾಗಿ ಹೇಳುತ್ತೇನೆ, ವಾಸಿಂ ಅಕ್ರಮ್ ಏನಾದರೂ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತನಾಡಿದ್ದರೆ ಆತನನ್ನು ಕೊಲ್ಲುತ್ತಿದ್ದೆ ಆದರೆ ವಾಸಿಂ ಅಕ್ರಮ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com