ಕೊರೋನಾ ಎಫೆಕ್ಟ್: 2023ರವರೆಗೆ ವೇಳಪಟ್ಟಿಗಳಲ್ಲಿ ಬದಲಾವಣೆ ಸಾಧ್ಯತೆ- ಐಸಿಸಿ

ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅಲ್ಲದೆ ಎಲ್ಲ ಕ್ರೀಡಾಕೂಟಗಳನ್ನು ಮುಂದೂಡಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2023ರವರೆಗೆ ವೇಳಾಪಟ್ಟಿಗಳ ಮರು ಪರಿಶೀಲನೆ ಬಗ್ಗೆ ಚಿಂತನೆ ನಡೆಸಿದೆ.
ಐಸಿಸಿ
ಐಸಿಸಿ
Updated on: 

ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅಲ್ಲದೆ ಎಲ್ಲ ಕ್ರೀಡಾಕೂಟಗಳನ್ನು ಮುಂದೂಡಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2023ರ ವರೆಗೆ ವೇಳಾಪಟ್ಟಿಗಳ ಮರು ಪರಿಶೀಲನೆ ಬಗ್ಗೆ ಚಿಂತನೆ ನಡೆಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರುವಾರ ನಡೆದ ಸಭೆಯ ನಂತರ ಮಾಹಿತಿ ನೀಡಿದ ಐಸಿಸಿಯ, ಸದಸ್ಯ ರಾಷ್ಟ್ರಗಳು ಹಾಗೂ ಅಂಗ ಸಂಸ್ಥೆ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2023ರ ವರೆಗಿನ ಕ್ರೀಡಾಕೂಟದಲ್ಲಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಿದೆ ಎಂದು ತಿಳಿಸಿದೆ.

ಐಸಿಸಿಯ 12 ಪೂರ್ಣ ಸದಸ್ಯರು ಮತ್ತು ಮೂರು ಸಹಾಯಕ ಪ್ರತಿನಿಧಿ ರಾಷ್ಟ್ರಗಳ ಸಿಇಒಗಳು ಕೋವಿಡ್ -19 ನಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದೆ.

2023 ರ ವೇಳೆಗೆ ಎಫ್‌ಟಿಪಿ ಕಾರ್ಯಕ್ರಮಗಳಲ್ಲಿನ ಬದಲಾವಣೆಗಳನ್ನು ಸಾಮೂಹಿಕವಾಗಿ ಪರಿಶೀಲಿಸಲು ಒಪ್ಪಲಾಗಿದೆ. ವಾಸ್ತವವಾಗಿ, ಕೋವಿಡ್ -19 ಕಾರಣದಿಂದಾಗಿ ಐಪಿಎಲ್ ಸೇರಿದಂತೆ ಅನೇಕ ದೊಡ್ಡ ಕ್ರಿಕೆಟ್ ಪಂದ್ಯಾವಳಿಗಳನ್ನು ಮುಂದೂಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com