ಸಿಕ್ಸರ್ ನೊಂದಿಗೆ ಚೊಚ್ಚಲ ಅರ್ಧಶತಕ ಗಳಿಸಿದ ವೇಗಿ ಜಸ್ಪ್ರೀತ್ ಬೂಮ್ರಾ! ವಿಡಿಯೋ

ಆಸ್ಟ್ರೇಲಿಯಾ ಎ ವಿರುದ್ಧ ಶುಕ್ರವಾರ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಆರಂಭಿಕ ದಿನದಂದು ವೇಗಿ ಜಸ್ಪ್ರಿತ್ ಬೂಮ್ರಾ ಮೊದಲ ಬಾರಿಗೆ ಅರ್ಧಶತಕ ಗಳಿಸಿದ್ದಾರೆ.
ವೇಗಿ ಜಸ್ಪ್ರೀತ್ ಬೂಮ್ರಾ
ವೇಗಿ ಜಸ್ಪ್ರೀತ್ ಬೂಮ್ರಾ
Updated on

ಸಿಡ್ನಿ: ಆಸ್ಟ್ರೇಲಿಯಾ ಎ ವಿರುದ್ಧ ಶುಕ್ರವಾರ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಆರಂಭಿಕ ದಿನದಂದು ವೇಗಿ ಜಸ್ಪ್ರಿತ್ ಬೂಮ್ರಾ ಮೊದಲ ಬಾರಿಗೆ ಅರ್ಧಶತಕ ಗಳಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೂಮ್ರಾ 57 ಎಸೆತಗಳಲ್ಲಿ 55 ರನ್ ಗಳಿಸಿದ ಶ್ರೇಷ್ಠ ಭಾರತೀಯ ಆಟಗಾರ ಎನಿಸಿಕೊಂಡರು. ಮೈದಾನದಲ್ಲಿ ರನ್ ಗಳಿಸಲು ಭಾರತೀಯ ಬ್ಯಾಟ್ಸ್ ಮನ್ ಗಳು ಹೆಣಗಾಡುತ್ತಿದ್ದಾಗ ಉತ್ತಮ ರೀತಿಯ ಬ್ಯಾಟಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬೂಮ್ರಾ ದೇಶದ ಮಾನ ಕಾಪಾಡಿದರು. 

ಬೌನ್ಸರ್ ವಿಲ್  ಸದರ್ಲ್ಯಾಂಡ್  ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ  27 ವರ್ಷದ ಬೂಮ್ರಾ, ಅರ್ಧ ಶತಕದ ಮೈಲುಗಲ್ಲು ಸಾಧಿಸಿದರು. ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಜೊತೆಯಾಟದ 10 ವಿಕೆಟ್ ನಲ್ಲಿ 71 ರನ್ ಗಳು ಹರಿದುಬಂದವು. ಭಾರತ 48.3 ಓವರ್ ಗಳಲ್ಲಿ ಕೇವಲ 194 ರನ್ ಗಳಿಸುವ ಮೂಲಕ ನಿರಾಸೆ ಅನುಭವಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com