ಬಾಕ್ಸಿಂಗ್ ಡೇ ಗೆ ಗಿಲ್, ರಾಹುಲ್ , ಪಂತ್ ಸಜ್ಜು: ಸಹಾ, ಪೃಥ್ವಿ ಶಾಗೆ ಕೊಕ್ ಸಾಧ್ಯತೆ

ಆಡಿಲೇಡ್ ಟೆಸ್ಟ್ ನಲ್ಲಿ ಬ್ಯಾಟಿಂಗ್ ವೈಫಲ್ಯದ ನಂತರ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದ್ದು, ಉಳಿದಿರುವ ಟೆಸ್ಟ್  ಪಂದ್ಯಗಳಿಗೆ ವಿಕೆಟ್ ಕೀಪರ್ -ಬ್ಯಾಟ್ಸ್ ಮನ್ ವೃದ್ಧಿಮನ್ ಸಹಾ ಮತ್ತು ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ. 
ರಾಹುಲ್, ಪೃಥ್ವಿ ಶಾ, ವೃದ್ಧಿಮನ್ ಸಹಾ
ರಾಹುಲ್, ಪೃಥ್ವಿ ಶಾ, ವೃದ್ಧಿಮನ್ ಸಹಾ

ನವದೆಹಲಿ: ಆಡಿಲೇಡ್ ಟೆಸ್ಟ್ ನಲ್ಲಿ ಬ್ಯಾಟಿಂಗ್ ವೈಫಲ್ಯದ ನಂತರ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದ್ದು, ಉಳಿದಿರುವ ಟೆಸ್ಟ್  ಪಂದ್ಯಗಳಿಗೆ ವಿಕೆಟ್ ಕೀಪರ್ -ಬ್ಯಾಟ್ಸ್ ಮನ್ ವೃದ್ಧಿಮನ್ ಸಹಾ ಮತ್ತು ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ. 

ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದವರೆಗೂ ಹಿರಿಯ ಆಟಗಾರ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಯುವ ಆಟಗಾರ ಶುಬ್ಮನ್ ಗಿಲ್, ಪೃಥ್ವಿ ಶಾ ಅವರ ಬದಲಿಯಾಗಿ ಕಾಣುತ್ತಾರೆ ಎಂದು ತಿಳಿದುಬಂದಿದೆ.

ಬ್ಯಾಟಿಂಗ್ ನಲ್ಲಿ ವಿಶ್ವಾಸ ಮೂಡಿಸುವಲ್ಲಿ ವೃದ್ದಿಮನ್ ಸಹಾ ಕೂಡಾ ವಿಫಲವಾಗಿದ್ದು, ಅವರ ಜಾಗಕ್ಕೆ ರಿಷಭ್ ಪಂತ್ ಬರುವ ಸಾಧ್ಯತೆಯಿದೆ. ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಇಲೆವೆನ್ ನಲ್ಲಿ ಆಡಲು ಮುಂದಾಗಿದ್ದಾರೆ. 

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಸ್ಥಳಗಳಲ್ಲಿ ರಿಷಭ್ ಪಂತ್ ನಮ್ಮ ಮೊದಲ ಆಯ್ಕೆಯ ಕೀಪರ್ ಆಗಿರುತ್ತಾರೆ ಎಂಬುದನ್ನು ಸಮಿತಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ನಡೆಯುವ ಪಂದ್ಯಗಳನ್ನು ನೋಡಿದಾಗ ಹೆಚ್ಚಿನ ಸಂದರ್ಭದಲ್ಲಿ ಆರನೇ ಕ್ರಮಾಂಕದ ನಂತರ ಬ್ಯಾಟ್ಸ್ ಮನ್ ಗಳ ಅಗತ್ಯವಿರುವುದಿಲ್ಲ, ಪರಿಣತ ಕೀಪರ್ ಅಗತ್ಯವಿರುತ್ತದೆ ಎಂದು ಪ್ರಸಾದ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕಳೆದ ತಿಂಗಳುಗಳಲ್ಲಿ ರಿಷಭ್ ಪಂತ್ ಫಿಟ್ನೆಸ್ ಹೊಂದಿದ್ದು, ಟೆಸ್ಟ್ ಅಭ್ಯಾಸದ ವೇಳೆಯಲ್ಲಿ ಉತ್ತಮ ಸಂಪರ್ಕದಲ್ಲಿದ್ದಾರೆ. ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅವರಿಗೆ ಅವಕಾಶ ನೀಡಿದರೆ ತಂಡದ ನಿರ್ವಹಣೆಯನ್ನು ನಾನು ಒಪ್ಪುತ್ತೇನೆ ಎಂದು ಪ್ರಸಾದ್ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿ ಮತ್ತು ಕೆಎಲ್ ರಾಹುಲ್ ಗೆ ಉತ್ತಮ ಅವಕಾಶ ದೊರೆಯಲಿದ್ದು, ವಿಹಾರಿ ನಂಬರ್ 4 ಅಥವಾ 5, ಕೆ. ಎಲ್. ರಾಹುಲ್ ನಂಬರ್ 6ರ  ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ಮಾಡುವ ವಿಶ್ವಾಸದಲ್ಲಿರುವುದಾಗಿ ಆಯ್ಕೆದಾರರ ಮಾಜಿ ಅಧ್ಯಕ್ಷ ಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com