ಮೆಲ್ಬೋರ್ನ್: ಸಿಡ್ನಿ ಯಲ್ಲಿನ ಕೋವಿಡ್ -19 ಪರಿಸ್ಥಿತಿ ಕಾರಣಕ್ಕೆ ಮೂಲ ವೇಳಾಪಟ್ಟಿಯನ್ನೇ ಮುಂದುವರಿಸಲು ಪ್ರಯತ್ನಿಸಿದರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಆತಿಥ್ಯ ವಹಿಸಲು ಮೆಲ್ಬೋರ್ನ್ ನಲ್ಲಿ ಸಹ ಸಿದ್ದತೆ ನಡೆಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಜನವರಿ 7 ರಿಂದ ಮೂರನೇ ಟೆಸ್ಟ್ ಆತಿಥ್ಯ ವಹಿಸಲಿರುವ ಸಿಡ್ನಿಯಲ್ಲಿ ಹೊಸ ಕೋವಿಡ್ 19 ಸೋಂಕು ಹರಡಿರುವ ಕಾರಣ ಈ ತಿಂಗಳ ಆರಂಭದಿಂದ ಮೂರನೇ ಟೆಸ್ಟ್ ನ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. "ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಹಾಗೂ ಗಬ್ಬಾದಲ್ಲಿ ನಾಲ್ಕನೇ ಟೆಸ್ಟ್ ಅನ್ನು ಮೂಲ ವೇಳಾಪಟ್ಟಿಯ ಪ್ರಕಾರ ಆಡಲು ಉತ್ತಮ ಅವಕಾಶವನ್ನು ಕಲ್ಪಿಸುವ ಬದ್ದತೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪುನರುಚ್ಚರಿಸಿದೆ"
"ಎನ್ಎಸ್ಡಬ್ಲ್ಯೂನಲ್ಲಿನ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಸಿಡ್ನಿಯಲ್ಲಿ ಆಡುವುದನ್ನು ನಿಷೇಧಿಸುವಂತಿದ್ದರೆ ನಮ್ಮ ಆದ್ಯತೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನವಾಗಿರಲಿದೆ. ಮತ್ತು ನಾಲ್ಕನೇ ಟೆಸ್ಟ್ ಈ ಮುನ್ನಿನ ವೇಳಾಪಟ್ಟಿಯಂತೆ ಗಬ್ಬಾದಲ್ಲಿ ನಡೆಯಲಿದೆ" ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ ತಿಳಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಸಮಯದಲ್ಲಿ ಮೂರನೇ ಟೆಸ್ಟ್ ಸ್ಥಳದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಉತ್ತರ ಕಡಲತೀರಗಳಲ್ಲಿನ ಪರಿಸ್ಥಿತಿ ಸುಧಾರಿಸಿದ್ದರೂ ಸಹ, ಕ್ವೀನ್ಸ್‌ಲ್ಯಾಂಡ್ ಅಗತ್ಯವಾದ ವಿನಾಯಿತಿಗಳನ್ನು ನೀಡುವುದಿಲ್ಲ ಎಂಬ ಆತಂಕಗಳಿವೆ, ಇದರರ್ಥ ಆಟಗಾರರು ಮತ್ತು ಪ್ರಸಾರ ಸಿಬ್ಬಂದಿಗೆ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳ ನಡುವೆ ಸಿಡ್ನಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ವಿನಾಯಿತಿ ಪಡೆಯಲು ಮಂಡಳಿಯು ಕ್ವೀನ್ಸ್‌ಲ್ಯಾಂಡ್ ಸರ್ಕಾರದೊಂದಿಗೆ ಸದಾ ಸಂಪರ್ಕದಲ್ಲಿದೆಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ ಹೇಳಿದ್ದಾರೆ.
ಸರಣಿಯ ಅಂತಿಮ ಪಂದ್ಯವನ್ನು ಜನವರಿ 15 ರಂದು ಗಬ್ಬಾದಲ್ಲಿ ಆಡಲು ನಿರ್ಧರಿಸಲಾಗಿ
Advertisement