ಬಾಕ್ಸಿಂಗ್ ಡೇ ಟೆಸ್ಟ್: ರಹಾನೆ ವಿಶೇಷ ದಾಖಲೆ!

ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದುದರ ಮಧ್ಯೆಯೇ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ

ಮೆಲ್ಬೋರ್ನ್: ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದುದರ ಮಧ್ಯೆಯೇ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

 ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ  ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿ ಭಾರತದ ಮುಂದಾಳತ್ವ ವಹಿಸಿದ್ದ ರಹಾನೆ ನಾಯಕತ್ವ, ಯೋಜನೆ, ಬ್ಯಾಟಿಂಗ್, ಫೀಲ್ಡಿಂಗ್‌ಗಾಗಿ ಗಮನ ಸೆಳೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 27 ರನ್ ಬಾರಿಸಿರುವ ರಹಾನೆ ಪಂದ್ಯದ ಗೆಲುವಿಗೆ ಪ್ರಮುಖ ಕಾರಣರೂ ಎನಿಸಿದ್ದಾರೆ.ಅಜಿಂಕ್ಯ ಹೆಸರಿಗೆ ವಿಶೇಷ ದಾಖಲೆಯೊಂದು ಸೇರ್ಪಡೆಯಾಗಿದೆ. 

ಅಜಿಂಕ್ಯ ರಹಾನೆಯವರು ಭಾರತದ ನಾಯಕತ್ವ ವಹಿಸಿಕೊಂಡ ಪಂದ್ಯಗಳಲ್ಲಿ ಗೆದ್ದಿದ್ದೇ ಹೆಚ್ಚು. ರಹಾನೆ ನಾಯಕತ್ವ ವಹಿಸಿದ ಭಾರತ -ಆಸ್ಟ್ರೇಲಿಯಾ, ಧರ್ಮಶಾಲಾ, 2017 , ಭಾರತ- ಬಾಂಗ್ಲಾದೇಶ, ಬೆಂಗಳೂರು, 2018 * ಭಾರತ -ಆಸ್ಟ್ರೇಲಿಯಾ, ಮೆಲ್ಬರ್ನ್, 2020 ನಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. 

ಭಾರತ ಟೆಸ್ಟ್ ತಂಡಕ್ಕೆ ನಾಯಕರಾಗಿದ್ದು ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಪಟ್ಟಿಯಲ್ಲಿ ರಹಾನೆ ಕೂಡ ಈಗ ಸೇರ್ಪಡೆಯಾಗಿದ್ದಾರೆ. ಈ ದಾಖಲೆಯೀಗ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ, ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಸ್ಮಾರ್ಟ್ ಕ್ಯಾಪ್ಟನ್ ಅಜಿಂಕ್ಯ ರಹಾನೆ ಹೆಸರಿನಲ್ಲಿದೆ.

ರಹಾನೆ ಕ್ಯಾಪ್ಟನ್ಸಿಯಲ್ಲಿ ಭಾರತಕ್ಕೆ ಗೆಲುವು 
ರಹಾನೆ ನಾಯಕತ್ವ ವಹಿಸಿದ ಕೆಳಗಿನ ಈ ಮೂರೂ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ 
* ಭಾರತ vs ಆಸ್ಟ್ರೇಲಿಯಾ, ಧರ್ಮಶಾಲಾ, 2017 
* ಭಾರತ vs ಬಾಂಗ್ಲಾದೇಶ, ಬೆಂಗಳೂರು, 2018
* ಭಾರತ vs ಆಸ್ಟ್ರೇಲಿಯಾ, ಮೆಲ್ಬರ್ನ್, 2020

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com