ಏಳು ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಅವರ ಪತ್ನಿ ಕೈಲಿಗೆ ವಿಚ್ಚೇದನ ನೀಡಿದ್ದು, ಏಳು ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.
ಮೈಕೆಲ್ ಕ್ಲಾರ್ಕ್
ಮೈಕೆಲ್ ಕ್ಲಾರ್ಕ್
Updated on

ಮೆಲ್ಬರ್ನ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಅವರ ಪತ್ನಿ ಕೈಲಿಗೆ ವಿಚ್ಚೇದನ ನೀಡಿದ್ದು, ಏಳು ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.

 2017 ಮೇ ತಿಂಗಳಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳನ್ನು ಹೊಂದಿದ್ದಾರೆ. ಕೆಲ ದಿನಗಳಿಂದ ಪ್ರತ್ಯೇಕವಾಗಿದ್ದೇವು. ಈಗ ಪ್ರತ್ಯೇಕವಾಗಿ ವಾಸಿಸುವ ಕಷ್ಟಕರ ನಿರ್ಧಾರ ಕೈಗೊಂಡಿರುವುದಾಗಿ ಇಬ್ಬರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಗಳ ಸಹ ಪೋಷಕರಾಗಿಲು ಬದ್ಧವರಾಗಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಂದಾಜು 40 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಪರಿಹಾರ ಮೊತ್ತವನ್ನು ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಮೈಕೆಲ್ ಕ್ಲಾರ್ಕ್ ನಾಯಕತ್ವದ ಆಸ್ಟ್ರೇಲಿಯಾ ತಂಡ 2015ರಲ್ಲಿ ವಿಶ್ವಕಪ್ ಜಯಿಸಿತ್ತು. 115 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ಲಾರ್ಕ್  28 ಶತಕಗಳು ಸೇರಿದಂತೆ ಒಟ್ಟಾರೇ 8, 643 ರನ್ ಗಳಿಸಿದ್ದಾರೆ. 245 ಏಕದಿನ ಹಾಗೂ 34 ಟಿ-20 ಪಂದ್ಯಗಳನ್ನಾಡಿದ್ದು, 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com