ಎರಡನೇ ಪಂದ್ಯದಲ್ಲಿಯೂ ಕೊಹ್ಲಿ ಪಡೆಯನ್ನು ಸುಲಭವಾಗಿ ಬಗ್ಗು ಬಡಿಯುತ್ತೇವೆ: ಲಥಾಮ್

ಪ್ರಸ್ತುತ ಸಾಗುತ್ತಿರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ರನ್ ಮಶೀನ್ ಎಂದೇ ಖ್ಯಾತಿ ಗಳಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸುವಲ್ಲಿ ಎಡವುತ್ತಿದ್ದಾರೆ.
ಕೊಹ್ಲಿ ಪಡೆ-ಲಾಥಮ್
ಕೊಹ್ಲಿ ಪಡೆ-ಲಾಥಮ್
Updated on

ಕ್ರೈಸ್ಟ್ ಚರ್ಚ್: ಪ್ರಸ್ತುತ ಸಾಗುತ್ತಿರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ರನ್ ಮಶೀನ್ ಎಂದೇ ಖ್ಯಾತಿ ಗಳಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸುವಲ್ಲಿ ಎಡವುತ್ತಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ಒಟ್ಟು ಒಂಬತ್ತು ಇನಿಂಗ್ಸ್ ಗಳಲ್ಲಿ ಕೇವಲ 201 ರನ್ ಗಳಿಗೆ ಸೀಮಿತರಾಗಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ.

ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ ಎರಡೂ ಇನಿಂಗ್ಸ್ ಗಳಲ್ಲಿ 2 ಮತ್ತು 19 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. ಇದರ ಪರಿಣಾಮ ಟೀಮ್ ಇಂಡಿಯಾ ನಾಯಕ ವಿರಾಟ್, ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಮುಂದಿನ ಶನಿವಾರ ಕ್ರೈಸ್ಟ್ ಚರ್ಚ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಿವೀಸ್ ಆರಂಭಿಕ ಟಾಮ್ ಲಥಾಮ್ ಅವರು ಭಾರತ ತಂಡದ ನಾಯಕನನ್ನು ಮತ್ತೊಮ್ಮೆ ಕಟ್ಟಿ ಹಾಕಲು ಇನ್ನೊಂದು ರಣತಂತ್ರವನ್ನು ರೂಪಸಿದ್ದೇವೆ ಎಂದು ಸೂಚನೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಟೀಂ ಇಂಡಿಯಾ ನಾಯಕ ಬ್ಯಾಟಿಂಗ್ ಗೆ ಬರುತ್ತಿದ್ದಂತೆ ನಾವು ಅವರನ್ನು ಕಟ್ಟಿ ಹಾಕಲು ಸಿದ್ದರಾಗುತ್ತೇವೆ. ಅವರೊಬ್ಬ ಗುಣಮಟ್ಟದ ಆಟಗಾರ ಹಾಗೂ ಆ ಕಾರಣದಿಂದಲೇ ಅವರು ವಿಶ್ವ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಹೆಚ್ಚು ದಿನಗಳ ಕಾಲ ಅಲಂಕರಿಸಿದ್ದಾರೆ,' ಎಂದು ಹೇಳಿದರು.

ತಾನೊಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಎಂಬುದನ್ನು ಎಲ್ಲ ಪರಿಸ್ಥಿತಿಗಳಲ್ಲಿಯೂ ಕೊಹ್ಲಿ  ಸಾಬೀತು ಪಡಿಸಿದ್ದಾರೆ. ಅದರಂತೆ ದೀರ್ಘ ಅವಧಿ ಕಾಲ ಅಗ್ರ ಸ್ಥಾನದಲ್ಲಿ ಮೆರೆದಿದ್ದಾರೆ. ಇಲ್ಲಿನ ಪಿಚ್ ಹೆಚ್ಚಿನ ಚಲನೆ ಹೊಂದಿದ್ದರೆ, ಅದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

ಗಾಯದಿಂದಾಗಿ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದ ನೀಲ್ ವ್ಯಾಗ್ನರ್ ಎರಡನೇ ಹಣಾಹಣಿಗೆ ತಂಡಕ್ಕೆ ಮರಳುತ್ತಿದ್ದು, ಬೌಲಿಂಗ್ ಇನ್ನಷ್ಟು ಬಲಿಷ್ಟವಾಗಲಿದೆ ಎಂದು ಎಡಗೈ ಬ್ಯಾಟ್ಸ್ ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ 1-0 ಮುನ್ನಡೆ ಸಾಧಿಸಿದೆ. ಆದರೂ, ಎರಡನೇ ಹಣಾಹಣಿಯಲ್ಲಿ ಗೆದ್ದು ಮತ್ತೊಮ್ಮೆ 60 ಅಂಕಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿ ಖಾತೆಗೆ ಹಾಕಿಕೊಳ್ಳಲು ಕಿವೀಸ್ ತವಕಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com