2ನೇ ಟೆಸ್ಚ್ ಪಂದ್ಯ: ಕಿವೀಸ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 242 ರನ್ ಗಳಿಗೆ ಆಲೌಟ್

ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಕೊಹ್ಲಿ ಪಡೆ ಕೇವಲ 242 ರನ್ ಗಳಿಗೆ ಆಲೌಟ್ ಆಗಿದೆ.
ವಿರಾಟ್ ಕೊಹ್ಲಿ ಔಟಾದ ಕ್ಷಣ
ವಿರಾಟ್ ಕೊಹ್ಲಿ ಔಟಾದ ಕ್ಷಣ
Updated on

ಕ್ರೈಸ್ಟ್ ಚರ್ಚ್: ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಕೊಹ್ಲಿ ಪಡೆ ಕೇವಲ 242 ರನ್ ಗಳಿಗೆ ಆಲೌಟ್ ಆಗಿದೆ.

ಕ್ರೈಸ್ಟ್ ಚರ್ಚ್ ನ ಹೆಗ್ಲೆ ಓವಲ್ ಕ್ರೀಡಾಂಗಣದಲ್ಲಿ ಇಂದು ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ ನ ಕೈಲ್ ಜೇಮೀಸನ್ ಅವರ ಮಾರಕ ಬೌಲಿಂಗ್ ತತ್ತರಿಸಿ ಕೇವಲ 242 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಪೃಥ್ವಿ ಶಾ (54 ರನ್), ಚೇತೇಶ್ವರ ಪೂಜಾರ (54 ರನ್) ಮತ್ತು ಹನುಮ ವಿಹಾರಿ (55ರನ್) ಬಿಟ್ಟರೆ ಉಳಿದಾವ ಬ್ಯಾಟ್ಸ್ ಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಸಾಹಸ ಮಾಡಲಿಲ್ಲ.

ನಾಯಕ ವಿರಾಟ್ ಕೊಹ್ಲಿ 3ರನ್ ಗೆ ಔಟಾದರೆ, ಮಯಾಂಕ್ ಅಗರ್ವಾಲ್ ಕೇವಲ 7ರನ್ ಗಳಿಸಿ ನಿರ್ಗಮಿಸಿದರು. ರಹಾನೆ ಕೂಡ 7 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದು ಭಾರತಕ್ಕೆ ತೀವ್ರ ಹಿನ್ನಡೆಯಾಯಿತು. ಪರಿಣಾಮ ಭಾರತ ಕೇವಲ 242 ರನ್ ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರ ಕೈಲ್ ಜೇಮೀಸನ್ 5 ವಿಕೆಟ್ ಪಡೆದರೆ, ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರು. ಅಂತೆಯೇ ನೀಲ್ ವಾಗ್ನರ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com