ಬೆಂಗಳೂರು ಪಂದ್ಯದ ವೇಳೆ ಧವನ್ ಭುಜಕ್ಕೆ ಗಾಯ: ನ್ಯೂಜಿಲೆಂಡ್ ಪ್ರವಾಸ ಡೌಟು
ಬೆಂಗಳೂರು: ಆರಂಭಿಕ ಆಟಗಾರ ಶಿಖರ್ ಧವನ್, ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯದ ಪಂದ್ಯದಲ್ಲಿ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರಿಂದ ಬ್ಯಾಟಿಂಗ್ ಮಾಡಲಿಲ್ಲ.
ನಂತರ ಎಕ್ಸ್ - ರೇ ಪರೀಕ್ಷೆ ಮಾಡಲಾಗಿದ್ದು, ಎಡ ಕೈಯಲ್ಲಿ ಬಿರುಕು ಕಾಣಿಸಿಕೊಂಡಿದೆ (ಸ್ಲಿಂಗ್ ) ಇದರಿಂದಾಗಿ ಅವರು ಜನವರಿ 24 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.
ವೈದ್ಯಕೀಯ ತಂಡ ಶಿಖರ್ ಧವನ್ ಅವರಿಗೆ ಮಾಡಿರುವ ಸ್ಕ್ಯಾನ್ ನ್ನು ಪರಿಶೀಲಿಸಿದ್ದು, ಯಾವಾಗ ಆಡಬಹುದು ಎಂದು ಹೇಳುವುದಾಗಿ ಬಿಸಿಸಿಐ ಮಾಧ್ಯಮ ಮ್ಯಾನೇಜರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಐದನೇ ಓವರ್ ನಲ್ಲಿ ಚೆಂಡನ್ನು ತಡೆಯುವ ಯತ್ನದಲ್ಲಿ ಧವನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ನಂತರ ಚಾಹೆಲ್ ಬದಲಿ ಆಟಗಾರನಾಗಿ ಆಡಿದ್ದರು. ನಂತರ ಬ್ಯಾಟಿಂಗ್ ಕೂಡಾ ಮಾಡಿರಲಿಲ್ಲ.
ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಹೆಬ್ಬೆಟ್ಟು ಗಾಯದಿಂದ ನರಳಿದ್ದರು. ನಂತರ ವಾಪಾಸ್ ಆದ ನಂತರ ಮುಸ್ತಾಕ್ ಆಲಿ ಟ್ರೋಫಿ ವೇಳೆಯಲ್ಲಿ ಮೊಣಕಾಲಿನ ಗಾಯದಿಂದ ಬಳಲಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ