2008ರ ಸಿಡ್ನಿ ಟೆಸ್ಟ್‌: ನನ್ನ ಆ 2 ತಪ್ಪುಗಳಿಂದಾಗಿ ಭಾರತ ಸೋಲುವಂತಾಯಿತು - ಸ್ವೀವ್ ಬಕ್ನರ್‌

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2008ರ ಸಿಡ್ನಿ ಟೆಸ್ಟ್‌ ಪಂದ್ಯ ಕ್ರಿಕೆಟ್‌ ಇತಿಹಾಸದಲ್ಲಿನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿದೆ. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್‌ಫೀಲ್ಡ್‌ ಅಂಪೈರ್‌ ಸ್ಟೀವ್‌ ಬಕ್ನರ್‌ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.
ಸ್ಟೀವ್ ಬಕ್ನರ್
ಸ್ಟೀವ್ ಬಕ್ನರ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2008ರ ಸಿಡ್ನಿ ಟೆಸ್ಟ್‌ ಪಂದ್ಯ ಕ್ರಿಕೆಟ್‌ ಇತಿಹಾಸದಲ್ಲಿನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿದೆ. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್‌ಫೀಲ್ಡ್‌ ಅಂಪೈರ್‌ ಸ್ಟೀವ್‌ ಬಕ್ನರ್‌ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.

ಆ ಪಂದ್ಯದಲ್ಲಿ ತಾವು ಎರಡು ತಪ್ಪುಗಳನ್ನು ಮಾಡಿದ್ದಾಗಿ ಸ್ಟೀವ್‌ ಬಕ್ನರ್‌ ಇದೀಗ ಒಪ್ಪಿಕೊಂಡಿದ್ದಾರೆ. ಅದೇ ಪಂದ್ಯದಲ್ಲಿ ಟೀಮ್‌ ಇಂಡಿಯಾ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್  ಆಂಡ್ರ್ಯೂ ಸೈಮಂಡ್ಸ್‌ ನಡುವೆ 'ಮಂಕಿ ಗೇಟ್‌' ವಿವಾದವೂ ನಡೆದಿತ್ತು.

12 ವರ್ಷಗಳ ಹಿಂದೆ ನಡೆದ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಾಟಕೀಯ ರೀತಿಯಲ್ಲಿ ಐದನೇ ದಿನದಂದು ಜಯ ದಾಖಲಿಸಿತ್ತು. ಇದಕ್ಕೆ ತಮ್ಮಿಂದಿ ಹೊರಬಂದ ಎರಡು ತಪ್ಪು ನಿರ್ಧಾರಗಳು ಕಾರಣ ಎಂದು ಬಕ್ನರ್‌ ಇದೀಗ ಬಾಯ್ಬಿಟ್ಟಿದ್ದಾರೆ.

ಅಂದಹಾಗೆ ಇದಕ್ಕೂ ಮುನ್ನ ಸಚಿನ್‌ ತೆಂಡೂಲ್ಕರ್‌ ವಿಚಾರದಲ್ಲೂ ತಾವು ಎರಡು ಬಾರಿ ತಪ್ಪು ನಿರ್ಧಾರ ನೀಡಿದ್ದಾಗಿ ಬಕ್ನರ್‌ ಹೇಳಿಕೊಂಡಿದ್ದರು. ಸಚಿನ್‌ ಎದುರು ಬೇಕೆಂದೇ ತಪ್ಪು ನಿರ್ಧಾರ ನೀಡುತ್ತಾರೆ ಎಂಬ ಆರೋಪವೂ ವೆಸ್ಟ್‌ ಇಂಡೀಸ್‌ ಮೂಲಕ ಅನುಭವಿ ಅಂಪೈರ್ ಬಕ್ನರ್‌ ಮೇಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com