ಅರ್ಧ ಸತ್ಯ ತಿಳಿದು ಪ್ರಶ್ನೆ ಕೇಳಬೇಡಿ, ಸಂಪೂರ್ಣವಾಗಿ ಮಾಹಿತಿ ಪಡೆದು ಸುದ್ದಿಗೋಷ್ಠಿಗೆ ಬನ್ನಿ: ಪತ್ರಕರ್ತರ ವಿರುದ್ಧ ಕೊಹ್ಲಿ ಆಕ್ರೋಶ

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಸೋಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹತಾಶರನ್ನಾಗಸಿದೆಯೇ..? ಇಂತಹುದೊಂದು ಪ್ರಶ್ನೆಗೆ ಕಾರಣವಾಗಿರುವುದು ಅವರು ಇತ್ತೀಚಿಗೆ ಪತ್ರಿಕಾ  ಸಿಬ್ಬಂದಿಗಳ ವಿರುದ್ಧ ಸಿಡಿಮಿಡಿಗೊಂಡಿರುವುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಸೋಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹತಾಶರನ್ನಾಗಸಿದೆಯೇ..? ಇಂತಹುದೊಂದು ಪ್ರಶ್ನೆಗೆ ಕಾರಣವಾಗಿರುವುದು ಅವರು ಇತ್ತೀಚಿಗೆ ಪತ್ರಿಕಾ  ಸಿಬ್ಬಂದಿಗಳ ವಿರುದ್ಧ ಸಿಡಿಮಿಡಿಗೊಂಡಿರುವುದು.

ಕ್ರೈಸ್ಟ್ ಚರ್ಚ್ ನಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 7 ವಿಕೆಟ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಕೊಹ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತೀವ್ರ ಗರಂ ಆದರು.

ಕೊಹ್ಲಿ ಮೈದಾನದಲ್ಲಿ ತಮ್ಮ ಆಕ್ರಮಶೀಲ ಮನೋಭಾವದ ಕುರಿತು ಪತ್ರಕರ್ತರು ಕೇಳ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಅಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಮೊದಲು ಅಲ್ಲೇನಾಯಿತು ಅದನ್ನು ತಿಳಿದು ಕೊಂಡ ಮಾತನಾಡಿ. ಅರ್ಧ ಸತ್ಯ ತಿಳಿದು ಪ್ರಶ್ನೆ ಕೇಳಲು ಬರಬೇಡಿ.. ಮೊದಲು ಅಲ್ಲೇನಾಯಿತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಬಳಿಕ ಸುದ್ದಿಗೋಷ್ಛಿಗೆ ಬನ್ನಿ ಎಂದು ಕೊಹ್ಲಿ ಪತ್ರಕರ್ತನ ವಿರುದ್ಧ ಕಿಡಿಕಾರಿದ್ದಾರೆ.

ಇದಕ್ಕೂ ಮೊದಲು ತಮ್ಮ ಬ್ಯಾಟಿಂಗ್ ಕುರಿತು ಕೇಳಿದ್ದಪ್ರಶ್ನೆಗೂ ಕಿಡಿಕಾರಿದ್ದ ಕೊಹ್ಲಿ ಐ ಆಮ್ ಆಲ್ರೈಟ್, ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಹೊರಗಿನ ಜನರಂತೆ ಯೋಚಿಸಲು ನಾನು ಬಯಸುವುದಿಲ್ಲ. ಒಂದು ಇನ್ನಿಂಗ್‌ ನಲ್ಲಿ ವಿಫಲವಾಗಿದ್ದಕ್ಕೆ, ಹೊರಗಡೆ ನನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುತ್ತಿರುವುದು ನನಗೆ ತಿಳಿದಿದೆ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

2ನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರೇಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಾಮ್ ಲಾಥಮ್ ಬೌಲಿಂಗ್ ನಲ್ಲಿ ಶಮಿ ಔಟಾದಾಗ ಕೂಗುತ್ತಿದ್ದ ನ್ಯೂಜಿಲೆಂಡ್ ಪ್ರೇಕ್ಷಕರನ್ನು ಉದ್ದೇಶಿಸಿ ಕೊಹ್ಲಿ ಅವಾಚ್ಯ ಪದ ಬಳಕೆ ಮಾಡಿದ್ದರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಕೊಹ್ಲಿ ವಿರುದ್ಧ ಟೀಕಾಪ್ರಹಾರ ನಡೆದಿತ್ತು.

ಕಳೆದ ಹನ್ನೆರಡು ಇನ್ನಿಂಗ್ಸ್ ನಲ್ಲಿ (ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟಿನ ನಾಲ್ಕು ಇನ್ನಿಂಗ್ಸ್) 232 ರನ್ ಅನ್ನು. ಅಂದರೆ, ಸರಾಸರಿ ಕೇವಲ 19.3. ನ್ಯೂಜಿಲ್ಯಾಂಡ್ ಸರಣಿಯ ನಂತರ ಮತ್ತೆ ಸ್ವದೇಶದಲ್ಲಿ ಸರಣಿಗಳು ನಡೆಯಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com