ಟೀಂ ಇಂಡಿಯಾದ ಮುಂದಿನ ನಾಯಕ ಕೆಎಲ್ ರಾಹುಲ್: ಶ್ರೀಶಾಂತ್ ಭವಿಷ್ಯ

ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕ ಯಾರಾಗಬಹುದು ಎಂಬ ಚರ್ಚೆಗಳು ಸದ್ಯಕ್ಕೆ ನಡೆಯುತ್ತಿಲ್ಲ. ಆದರೆ ಕೊಹ್ಲಿ ನಂತರ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಬೇಕು ಎಂದು ವೇಗಿ ಶ್ರೀಶಾಂತ್ ಹೇಳಿದ್ದಾರೆ.
ಕೆಎಲ್ ರಾಹುಲ್-ಕೊಹ್ಲಿ
ಕೆಎಲ್ ರಾಹುಲ್-ಕೊಹ್ಲಿ

ನವದೆಹಲಿ: ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕ ಯಾರಾಗಬಹುದು ಎಂಬ ಚರ್ಚೆಗಳು ಸದ್ಯಕ್ಕೆ ನಡೆಯುತ್ತಿಲ್ಲ. ಆದರೆ ಕೊಹ್ಲಿ ನಂತರ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಬೇಕು ಎಂದು ವೇಗಿ ಶ್ರೀಶಾಂತ್ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಕೆಎಲ್ ರಾಹುಲ್ ಹೊಂದಿದ್ದಾರೆ. ನಾಯಕನಾಗುವ ಎಲ್ಲಾ ಗುಣ ಕೆಎಲ್ ರಾಹುಲ್ ಹೊಂದಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ. 

ಎಲ್ಲಾ ಮಾದರಿಗಳಲ್ಲೂ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸುವ ಚಾಕಚಕ್ಯತೆ ಇದೆ. ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ತಂಡದ ಬಗ್ಗೆ ಯೋಚಿಸುತ್ತಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com