ಲಂಡನ್: ಐಪಿಎಲ್‌ನಲ್ಲಿ ಆಡುವುದರಿಂದ ಬೇರೆ ದೇಶದ ಆಟಗಾರರು ಸಾಕಷ್ಟು ಲಾಭ ಗಳಿಸಿದ್ದಾರೆ ಮತ್ತು ಈ ಪಂದ್ಯಾವಳಿ ವಿಶ್ವದ ಅತ್ಯುತ್ತಮ ಪಂದ್ಯಾವಳಿ ಎಂದು ಇಂಗ್ಲೆಂಡ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್‌ನಿಂದಾಗಿ ಭಾರತದಲ್ಲಿ ವಿಧಿಸಲಾದ ಲಾಕ್‌ಡೌನ್ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಐಪಿಎಲ್‌ನ 13 ನೇ ಋತುವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನಿರ್ದಿಷ್ಟವಾಗಿ ಮುಂದೂಡಿದೆ.
ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಅನ್ನು ಮುಂದೂಡಿದರೆ, ಬಿಸಿಸಿಐ ಈ ಅವಧಿಯಲ್ಲಿ ಐಪಿಎಲ್ ಅನ್ನು ಆಯೋಜಿಸಬಹುದು ಎಂಬ ಚರ್ಚೆ ನಡೆಯುತ್ತಿದೆ.
Advertisement