ನನ್ನ ಹೃದಯ ಉತ್ತಮವಾಗಿದೆ: ಅಭಿಮಾನಿಗಳಿಗೆ ದೀಪಾವಳಿ ಶುಭಕೋರಿದ ಕಪಿಲ್ ದೇವ್

ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ವಾರದ ನಂತರ ಭಾರತದ ಮಾಜಿ ನಾಯಕ ಕಪಿಲ್ ದೇವ್ "ನನ್ನ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದಿದ್ದಾರೆ.  ಅಲ್ಲದೆ ತಾವು ಆರೋಗ್ಯವಂತರಾಗಿರುವುದಾಗಿ ತಿಳಿಸಿದ್ದಾರೆ.
ಕಪಿಲ್ ದೇವ್
ಕಪಿಲ್ ದೇವ್
Updated on: 

ನವದೆಹಲಿ: ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ವಾರದ ನಂತರ ಭಾರತದ ಮಾಜಿ ನಾಯಕ ಕಪಿಲ್ ದೇವ್ "ನನ್ನ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದಿದ್ದಾರೆ.  ಅಲ್ಲದೆ ತಾವು ಆರೋಗ್ಯವಂತರಾಗಿರುವುದಾಗಿ ತಿಳಿಸಿದ್ದಾರೆ.

ಕಳೆದ ತಿಂಗಳು, ಕಪಿಲ್ ಹೃದಯ ಸ್ತಂಭನದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

"ಎಲ್ಲರಿಗೂ ದೀಪಾವಳಿ ಶುಭಾಶಯಗಳು ಈ ವರ್ಷ ಪ್ರತಿಯೊಬ್ಬರಿಗೂ ಸಾಕಷ್ಟುಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು. ನಾನು ಆರೋಗ್ಯ ಹಾಗೂ ಸಂತೋಷದಿಂದಿದ್ದೇನೆ. ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿಶ್ವದಾದ್ಯಂತ ಎಲ್ಲರಿಗೂ ಸಾಕಷ್ಟು ಸಂತೋಷವನ್ನು ಬಯಸುತ್ತೇನೆ" ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಇಪ್ಪತ್ತು ದಿನಗಳ ನಂತರ ಕಪಿಲ್ ಗುರುವಾರ ಗಾಲ್ಫ್ ಕ್ಲಬ್ ಗೆ ಆಗಮಿಸಿದ್ದರು,ದೆಹಲಿ ಗಾಲ್ಫ್ ಕ್ಲಬ್‌ನಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಗಾಲ್ಫ್ ಆಡುವ ವೀಡಿಯೊವನ್ನು ಹಂಚಿಕೊಂಡಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com