ಸಿಡ್ನಿ: ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ನಿಂದ 30 ಕಿ.ಮೀ. ದೂರದಲ್ಲಿ ವಿಮಾನ ಅಪಘಾತ!
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ನಲ್ಲಿರುವ ಸಿಡ್ನಿ ಒಲಿಂಪಿಕ್ ಪಾರ್ಕ್ ನಿಂದ ಕೇವಲ 30 ಕಿಲೋ ಮೀಟರ್ ದೂರದಲ್ಲಿರುವ ಕ್ರೊಮರ್ ಪಾರ್ಕ್ ಆಟದ ಮೈದಾನದಲ್ಲಿ ಶನಿವಾರ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಅಲ್ಲಿ ಆಟವಾಡುತ್ತಿದ್ದ ಸ್ಥಳೀಯ ಕ್ರಿಕೆಟಿಗರು ಮತ್ತು ಫುಟ್‌ಬಾಲ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಮಾನ ಮೈದಾನದಲ್ಲಿ ಬಿದ್ದಾಗ ಕ್ರಿಕೆಟ್ ಮತ್ತು ಪುಟ್ಬಾಲ್ ಪಂದ್ಯಗಳು ನಡೆಯುತ್ತಿದ್ದವು. ಡಜನ್ ಗೂ ಹೆಚ್ಚು ಆಟಗಾರರು ಅಲ್ಲಿದ್ದರು. ವಿಮಾನ ಬೀಳುತ್ತಿರುವುದನ್ನು ಗಮನಿಸಿದ ಆಟಗಾರರು ದಿಕ್ಕಪಾಲಾಗಿ ಓಡಿಹೋಗಿ ಗಂಡಾಂತರದಿಂದ ಪಾರಾಗಿದ್ದಾರೆ.
ಶೆಡ್ ನಲ್ಲಿದ್ದ ಆಟಗಾರರಿಗೆ ಓಡಿ ಹೋಗುವಂತೆ ಕೂಗಿ ಹೇಳಿದ್ದರಿಂದ ಅವರು ಓಡಿ ಹೋದರು ಎಂದು ಕ್ರೊಮರ್ ಕ್ರಿಕೆಟ್ ಕ್ಲಬ್ ಹಿರಿಯ ಉಪಾಧ್ಯಕ್ಷ ಗ್ರೆಗ್ ರೊಲ್ಲಿನ್ಸ್ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಘಟನೆ ನಡೆದಾಗ 12 ಜನರು ಮೈದಾನದಲ್ಲಿ ಇದ್ದಿದ್ದಾಗಿ ಸ್ಕಾಟ್ ಮ್ಯಾನಿಂಗ್ ಎಂಬುವರು ತಿಳಿಸಿದ್ದಾರೆ.
ಎಂಜಿನ್ ಗಾಳಿಯನ್ನು ಹಾರಾಟದ ಮಧ್ಯೆ ಸ್ಥಗಿತಗೊಳಿಸಿದ ನಂತರ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಬದುಕುಳಿದಿದ್ದಾರೆ ಎಂಬುದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ