ಸಚಿನ್-ಸಂಜು
ಸಚಿನ್-ಸಂಜು

ಕೆಕೆಆರ್‌ ವಿರುದ್ಧ ಸ್ಟನ್ನಿಂಗ್‌ ಕ್ಯಾಚ್‌ ಹಿಡಿದ ಸಂಜು ಸ್ಯಾಮ್ಸನ್‌ಗೆ ಸಚಿನ್‌ ಶ್ಲಾಘನೆ, ವಿಡಿಯೋ!

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸಿಡಿಸಿದ ಎರಡು ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ನ  ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ನವದೆಹಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸಿಡಿಸಿದ ಎರಡು ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ನ  ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಅದೇ ರೀತಿ ಬುಧವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಸಂಜು ಸ್ಯಾಮ್ಸನ್‌ ಅವರಿಂದ ಅದೇ ಆಟವನ್ನು ನಿರೀಕ್ಷಿಸಲಾಗಿತ್ತು. ಆದರೆ, ಅವರು ನಿರೀಕ್ಷೆ ಹುಸಿಗೊಳಿಸಿದರು. ಬಲಗೈ ಬ್ಯಾಟ್ಸ್‌ಮನ್‌ ಕೇವಲ 9 ರನ್‌ಗಳಿಗೆ ಸೀಮಿತರಾದರು. ಕೇರಳ ಬ್ಯಾಟ್ಸ್‌ಮನ್‌ ಮೂಲತಃ ವಿಕೆಟ್‌ ಕೀಪರ್ ಆಗಿದ್ದು, ಒಳ್ಳೆಯ ಫೀಲ್ಡರ್‌ ಆಗದ್ದಾರೆ.

ಕೋಲ್ಕತಾ ನೈಟ್‌ ರೈಡರ್ಸ್ ಇನಿಂಗ್ಸ್‌ನಲ್ಲಿ ಪ್ಯಾಟ್‌ ಕಮಿನ್ಸ್ ಅವರ ಕ್ಯಾಚ್‌ ಅನ್ನು ಸಂಜು ಸ್ಯಾಮ್ಸನ್‌ ಅದ್ಭುತವಾಗಿ ಹಿಡಿದಿದ್ದರು. ಇಯಾನ್‌ ಮಾರ್ಗನ್‌ ಜತೆ ಸೇರಿ ಪ್ಯಾಟ್‌ ಕಮಿನ್ಸ್ 34 ರನ್‌ಗಳ ಜತೆಯಾಟವಾಡಿದ್ದರು. 18ನೇ ಓವರ್‌ನಲ್ಲಿ ಟಾಮ್‌ ಕರನ್‌ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್ ಬೌಂಡರಿಯತ್ತ ಹೊಡೆದ ಚೆಂಡನ್ನು ಸಂಜು ಸ್ಯಾಮ್ಸನ್‌ ಅದ್ಭುತವಾಗಿ ಹಿಡಿದಿದ್ದರು.

ಕ್ಯಾಚ್‌ ಹಿಡಿಯುವ ವೇಳೆ ಸಂಜು ಸ್ಯಾಮ್ಸನ್‌ ಚೆಂಡನ್ನು ಸರಿಯಾದ ವಿಧಾನವನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಕ್ಯಾಚ್‌ ಹಿಡಿದ ಬಳಿಕ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದರು. ತಲೆ ನೆಲಕ್ಕೆ ಜೋರಾಗಿ ತಾಗಿತು. ಇದರ ಹೊರತಾಗಿಯೂ ಅವರು ಇನಿಂಗ್ಸ್‌ನ ಇನ್ನುಳಿದ ಭಾಗದಲ್ಲಿ ಫೀಲ್ಡಿಂಗ್‌ ಮಾಡಿದ್ದರು. ಸಂಜು ಸ್ಯಾಮ್ಸನ್‌ ಅವರ ಕ್ಯಾಚ್‌ಗೆ ಸಚಿನ್‌ ತೆಂಡೂಲ್ಕರ್‌ ಕೂಡ ಶ್ಲಾಘಿಸಿದ್ದಾರೆ.

"ಸಂಜು ಸ್ಯಾಮ್ಸನ್ ಕ್ಯಾಚ್‌ ಹಿಡಿಯುತ್ತಿದ್ದ ವೇಳೆ ಅವರ ತಲೆಗೆ ಎಷ್ಟರ ಪ್ರಮಾಣದಲ್ಲಿ ನೋವಾಗಿದೆ ಎಂಬ ಬಗ್ಗೆ ನನಗೆ ಅರಿವಿದೆ. 1992 ವಿಶ್ವಕಪ್‌ ಟೂರ್ನಿಯ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ನಾನೂ ಇದೇ ರೀತಿ ಕ್ಯಾಚ್‌ ಹಿಡಿದಿದ್ದೆ. ಇದೇ ಅನುಭವ ನನಗೂ ಆಗಿದೆ," ಎಂದು ಸಂಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com