ಐಪಿಎಲ್ 2020: ಇದೇ ಫಸ್ಟ್ ಆ್ಯಂಡ್ ಫೈನಲ್ ವಾರ್ನಿಂಗ್, ಮಂಕಡಿಂಗ್ ಔಟ್ ಕುರಿತು ಆರ್.ಅಶ್ವಿನ್ ಎಚ್ಚರಿಕೆ

ಮಂಕಡಿಂಗ್ ಮೂಲಕ ಔಟ್ ಮಾಡುವ ಕುರಿತು ದೆಹಲಿಯ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬ್ಯಾಟ್ಸ್'ಮನ್'ಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ಮಂಗಳವಾರ ರವಾನಿಸಿದ್ದಾರೆ. 
ಆರ್.ಅಶ್ವಿನ್
ಆರ್.ಅಶ್ವಿನ್

ದುಬೈ: ಮಂಕಡಿಂಗ್ ಮೂಲಕ ಔಟ್ ಮಾಡುವ ಕುರಿತು ದೆಹಲಿಯ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬ್ಯಾಟ್ಸ್'ಮನ್'ಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ಮಂಗಳವಾರ ರವಾನಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಆರ್.ಅಶ್ವಿನ್ ಅವರು, ಇದನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ಐಪಿಎಲ್ 2020ರ ಮೊದಲ ಹಾಗೂ ಕೊನೆಯ ಎಚ್ಚರಿಕೆ. ಇದನ್ನು ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ.ಮುಂದೆ ನನ್ನನ್ನು ದೂಷಿಸಬೇಡಿ ಎಂದು ಮಂಕಡಿಂಗ್ ಮೂಲಕ ಔಟ್ ಮಾಡುವ ಕುರಿತು ಹೇಳಿ ಕೋಚ್ ರಿಕಿ ಪಾಂಟಿಂಕ್ ಹಾಗೂ ನಾನ್ ಸ್ಟೈಕ್ ನಲ್ಲಿದ್ದ ಆರೋನ್ ಫಿಂಚ್ ಅವರನ್ನು ಉಲ್ಲೇಖಿಸಿದ್ದಾರೆ.

ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್'ನಲ್ಲಿ ಮಂಕಡಿಂಗ್ ಮಾಡುವ ಮೂಲಕ ವಿಕೆಟ್ ಪಡೆದು ಆರ್ ಅಶ್ವಿನ್ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದರು. ಈ ಕುರಿತು ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. ಈ ಆವೃತ್ತಿಯ ಆರಂಭಕ್ಕೂ ಮುನ್ನ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ನೀಡಿದ ಹೇಳಿಕೆಯೊಂದು ಮತ್ತೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಬಾರಿಯ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡಿಂಗ್ ಮಾಡುವ ಅವಕಾಶವಿದ್ದರೂ ಕೇವಲ ವಾರ್ನಿಂಗ್ ನೀಡಿದ್ದಾರೆ. 

ಆರ್'ಸಿಬಿ ಆರಂಭಿಕ ಏರಾನ್ ಫಿಂಚ್ ರನ್ನು ಮಂಕಡಿಂಗ್ ಮೂಲಕ ಔಟ್ ಮಾಡುವ ಅವಕಾಶ ಅಶ್ವಿನ್ ಅವರಿಗೆ ಸಿಕ್ಕಿತ್ತು. ಅಶ್ವಿನ್ ಅವರು ಬೌಲಿಂಗ್ ಮಾಡುವಾಗ ಫಿಂಚ್ ಕ್ರೀಸ್ ಬಿಟ್ಟಿದ್ದರು. ಕೂಡಲೇ ಅಶ್ವಿನ್ ಅವರು ಬಾಲ್ ಎಸೆಯದೇ ವಿಕೆಟ್'ಗೆ ತಾಕಿಸಿ ಔಟ್ ಮಾಡಲು ಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಫಿಂಚ್ ವಾಪಸ್ ಕ್ರೀಸ್'ಗೆ ಬಂದರು. ಈ ಕುರಿತು ಟ್ವಿಟರ್ ನಲ್ಲಿ ಇದೀಗ ಅಶ್ವಿನ್ ಅವರು ತಮಾಷೆಯಾಗಿ ಬರೆದು, ನಾನು ಈಗಲೇ ವಾರ್ನಿಂಗ್ ಕೊಡುತ್ತಿದ್ದೇನೆ. ಇದನ್ನು ಅಧಿಕೃತವಾಗಿ ಹೇಳುತ್ತಿದ್ದೇನೆ. ಆಮೇಲೆ ನನ್ನನ್ನು ದೂಷಿಸಬೇಡಿ, ಕ್ರೀಸ್ ಬಿಟ್ಟರೆ ಮಂಕಡಿಂಗ್ ಔಟ್ ಮಾಡುತ್ತೇನೆಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com