ಐಪಿಎಲ್: ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ, ಕೆಕೆಆರ್ ಗೆ  59 ರನ್ ಜಯ

ವರುಣ್ ಚಕ್ರವರ್ತಿ (20ಕ್ಕೆ 5) ಮತ್ತು ಪ್ಯಾಟ್ ಕಮಿನ್ಸ್ (17ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ನಿತೀಶ್ ರಾಣಾ (81) ಮತ್ತು ಸುನೀಲ್ ನರೈನ್(64) ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಬಗ್ಗು ಬಡಿದು ಟೂರ್ನಿಯಲ್ಲಿ 6ನೇ ಜಯ ದಾಖಿಲಿಸಿತು.
ಐಪಿಎಲ್: ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ, ಕೆಕೆಆರ್ ಗೆ  59 ರನ್ ಜಯ
Updated on: 

ಅಬುದಾಭಿ: ವರುಣ್ ಚಕ್ರವರ್ತಿ (20ಕ್ಕೆ 5) ಮತ್ತು ಪ್ಯಾಟ್ ಕಮಿನ್ಸ್ (17ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ನಿತೀಶ್ ರಾಣಾ (81) ಮತ್ತು ಸುನೀಲ್ ನರೈನ್(64) ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಬಗ್ಗು ಬಡಿದು ಟೂರ್ನಿಯಲ್ಲಿ 6ನೇ ಜಯ ದಾಖಿಲಿಸಿತು.

ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಂಗ್ ಗೆ ಆಹ್ವಾನ ಪಡೆದ ಕೋಲ್ಕೊತಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತಗೊಂಡಿತು.

ಡೆಲ್ಲಿ ಪರ ಶ್ರೇಯಸ್ ಅಯ್ಯ ರ್ 47ರಿಷಬ್ ಪಂತ್ 27 ರನ್ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com