ಭಾರತ ತಂಡಕ್ಕೆ ಮತ್ತೆ ಸೂರ್ಯ ಕುಮಾರ್ ಆಯ್ಕೆ ಇಲ್ಲ: 'ತಾಳ್ಮೆ ಇರಲಿ' ಎಂದು ಕೋಚ್ ರವಿಶಾಸ್ತ್ರಿ ಸಲಹೆ!

ಹಾಲಿ ಐಪಿಎಲ್ ಟೂರ್ನಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನದ ಹೊರತಾಗಿಯೂ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಟೀಂ ಇಂಡಿಯಾಗೆ ಆಯ್ಕೆಯಾಗದಿರುವುದು ಹಲವರ ಅಚ್ಚರಿಗೆ ಕಾರಣವಾಗಿದ್ದು, ಇತ್ತ ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ 'ತಾಳ್ಮೆ'ಯಿಂದಿರುವಂತೆ ಸಲಹೆ ನೀಡಿದ್ದಾರೆ.
ಸೂರ್ಯ ಕುಮಾರ್ ಯಾದವ್ ಮತ್ತು ರವಿಶಾಸ್ತ್ರಿ
ಸೂರ್ಯ ಕುಮಾರ್ ಯಾದವ್ ಮತ್ತು ರವಿಶಾಸ್ತ್ರಿ
Updated on

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನದ ಹೊರತಾಗಿಯೂ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಟೀಂ ಇಂಡಿಯಾಗೆ ಆಯ್ಕೆಯಾಗದಿರುವುದು ಹಲವರ ಅಚ್ಚರಿಗೆ ಕಾರಣವಾಗಿದ್ದು, ಇತ್ತ ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ 'ತಾಳ್ಮೆ'ಯಿಂದಿರುವಂತೆ ಸಲಹೆ ನೀಡಿದ್ದಾರೆ.

ಬುಧವಾರ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅವರು, ಕೇವಲ 43 ಎಸೆತಗಳಲ್ಲಿ 79 ರನ್ ಗಳನ್ನು ಸಿಡಿಸಿ ಮುಂಬೈ ಇಂಡಿಯನ್ಸ್ ಗೆಲುವು ಸುಲಭವಾಗಿಸಿದ್ದರು. ಇದರ ನಡುವೆಯೇ ಅತ್ತ ಐಸಿಸಿ ಮುಂಬರುವ ಆಸ್ಚ್ರೇಲಿಯಾ ವಿರುದ್ಧದ ಟೂರ್ನಿಗಾಗಿ ತಂಡ ಪ್ರಕಟಿಸಿತ್ತು. ಈ ವೇಳೆ  ಸೂರ್ಯಕುಮಾರ್ ಯಾದವ್ ಮತ್ತು ಆಕ್ಸರ್ ಪಟೇಲ್ ರನ್ನು ಮತ್ತೆ ಕೈ ಬಿಟ್ಟಿತ್ತು. ಇದು ವ್ಯಾಪಕ ಚರ್ಚೆ ಮತ್ತು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧದ ಟೀಕಿಗೆ ಕಾರಣವಾಗಿತ್ತು.

ಇದರ ನಡುವೆಯೇ ಟೀಂ ಇಂಡಿಯಾ ಪ್ರಧಾನ ಕೋಚ್ ಸೂರ್ಯ ಕುಮಾರ್ ಯಾದವ್ ಅವರಿಗೆ ಟ್ವೀಟ್ ಮೂಲಕ ಧೈರ್ಯ ತುಂಬಿದ್ದು, ಸೂರ್ಯ ನಮಸ್ಕಾರ್, ದೃಢವಾಗಿರು ಮತ್ತು ತಾಳ್ಮೆಯಿಂದಿರು ಎಂದು ಟ್ವೀಟ್ ಮಾಡಿದ್ದಾರೆ.  

ಸೂರ್ಯಕುಮಾರ್‌ 10ನೇ ಅರ್ಧಶತಕ
ಇನ್ನು ನಿನ್ನೆ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲೂ ಅಬ್ಬರಿಸಿದ ಸೂರ್ಯಕುಮಾರ್ ಯಾದವ್, 29 ಎಸೆತಗಳಲ್ಲಿ ಅರ್ಧಶತಕ ಭಾರಿಸಿದರು. ಈ ಪಂದ್ಯ ಮಾತ್ರವಲ್ಲದೇ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಟೀಮ್ ಇಂಡಿಯಾದ ಕದ ತಟ್ಟುತ್ತಲೇ ಇದ್ದಾರೆ. 360 ಡಿಗ್ರಿ ಬ್ಯಾಟಿಂಗ್‌ ಮಾಡುವ  ಸಾಮರ್ಥ್ಯ ಹೊಂದಿರುವ ಮುಂಬೈನ ಯುವ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಆರ್‌ಸಿಬಿ ವಿರುದ್ಧ ಬಿಧವಾರದ ಪಂದ್ಯದಲ್ಲಿ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮುಂಬೈ ಪರ ಮ್ಯಾಚ್‌ ವಿನ್ನರ್‌ ಎನಿಸಿಕೊಂಡರು. ಇದು ಐಪಿಎಲ್ ವೃತ್ತಿಬದುಕಿನಲ್ಲಿ ಸೂರ್ಯ ಸಿಡಿಸಿದ 10ನೇ ಅರ್ಧಶತಕವಾಗಿದೆ.

ಆಯ್ಕೆ ಸಮಿತಿ ವಿರುದ್ಧ ತೀವ್ರ ಆಕ್ರೋಶ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ 20 ಐ ತಂಡಗಳನ್ನು ಘೋಷಿಸಿದ ನಂತರ, ಪಟ್ಟಿಯಿಂದ ಗಮನಾರ್ಹವಾದ ಲೋಪಗಳಲ್ಲಿ ಒಂದಾಗಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಆಯ್ಕೆಯಾಗಲಿಲ್ಲ. ಟಿ20 ಮಾದರಿ  ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿರುವ ಯಾದವ್, 2018 ರಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 51 ರ ಸರಾಸರಿಯಲ್ಲಿ 360 ರನ್ ಗಳಿಸಿದ ಮುಂಬೈ ಪರ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಇದೇ ಕಾರಣಕ್ಕೆ  ಮುಂಬರುವ ಪ್ರವಾಸಕ್ಕೆ ಬಲಗೈ ಆಟಗಾರರನ್ನು (ಟಿ 20 ಐಗಳಿಗೆ ಸಹ) ಆಯ್ಕೆ ಮಾಡದಿರುವ ಆಯ್ಕೆ ಸಮಿತಿಯ ನಿರ್ಧಾರವು ಹಲವಾರು ಭಾಗಗಳಿಂದ ಟೀಕೆಗೆ ಗುರಿಯಾಗಿದೆ.

ಹಿರಿಯ ಮಾಜಿ ಆಟಗಾರರಾದ ದಿಲೀಪ್ ವೆಂಗ್ಸರ್ಕರ್ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ. 

ಇನ್ನು ಮುಂಬೈ ಇಂಡಿಯನ್ಸ್ ಅಕ್ಟೋಬರ್ 31ರ ಶನಿವಾರ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ನಂಬರ್ 1 ತಂಡವಾಗಿ ಪ್ಲೇ ಆಫ್ ಹಂತಕ್ಕೇರಲು ಮುಂಬೈ ಉತ್ಸುಕವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com