ಐಪಿಎಲ್ 2020: 5 ವಿಕೆಟ್ ಗಳಿಂದ ಆರ್ ಸಿಬಿಯನ್ನು ಮಣಿಸಿದ ಸನ್ ರೈಸರ್ಸ್ ಹೈದ್ರಾಬಾದ್ 

 ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.
ಜೇಸನ್ ಹೋಲ್ಡರ್
ಜೇಸನ್ ಹೋಲ್ಡರ್
Updated on

ಶಾರ್ಜಾ:  ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.

ಆರ್ ಸಿಬಿ ನೀಡಿದ 121 ರನ್ ಗಳ ಸುಲಭ ಗುರಿಯನ್ನು ಕೇವಲ 14. 1 ಓವರ್ ಗಳಲ್ಲೇ ತಲುಪಿದ ಸನ್ ರೈಸರ್ಸ್ ತಂಡ, ಐದು ವಿಕೆಟ್ ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಫ್ಲೇ ಆಫ್ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.

ವೃದ್ಧಿಮಾನ್ ಸಾಹ (39) ಮನೀಷ್ ಪಾಂಡೆ (26) ಮತ್ತು ಜೇಸನ್ ಹೋಲ್ಡರ್ ( ಅಜೇಯ 26) ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಗೆಲುವು ದೊರಕಿಸಿಕೊಡುವಲ್ಲಿ ನೆರವಾದರು.

ಆರ್ ಸಿಬಿ ಪರ  ಯಜುವೇಂದ್ರ ಚಾಹಲ್ ಎರಡು ವಿಕೆಟ್ ಗಳನ್ನು ಪಡೆದುಕೊಂಡರೆ, ವಾಷಿಂಗ್ಟನ್ ಸುಂದರ್, ಇಸುರು ಉದಾನ ಮತ್ತು ನವದೀಪ್ ಸೈನಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

ನವೆಂಬರ್ 2 ರಂದು ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್  ಮುಖಾಮುಖಿಯಾಗಲಿದ್ದು, ಗೆದ್ದ ತಂಡ ಫ್ಲೇ ಆಫ್ ತಲುಪಲಿದೆ. ಸೋತ ತಂಡದ ಭವಿಷ್ಯ ಉಳಿದ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com